ಹೋಟೆಲ್ ಅಥವಾ ರೆಸ್ಟೋರೆಂಟ್ ನಲ್ಲಿ ನಿಮಗೆ ಸೇವೆ ಮಾಡಿದಾತನಿಗೆ ಎಷ್ಟು ಭಕ್ಷೀಸು (ಟಿಪ್ಸ್) ಕೊಡಬಹುದು ?
ಖರ್ಚಾಗಿರುವ ಬಿಲ್ ಜೊತೆಗೆ 10 ರೂ., 50 ರೂ., 100 ರೂ., 500 ರೂಪಾಯಿ ಇರಬಹುದಾ ?
ಆದರೆ, ನ್ಯೂಜೆರ್ಸಿಯ ದಿ ಸ್ಟಾರ್ವಿಂಗ್ ಆರ್ಟಿಸ್ಟ್ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ದ ಗ್ರಾಹಕರು 43.18 ಡಾಲರ್ ಮೌಲ್ಯದ ತಿಂಡಿ-ತಿನಿಸು ತಿಂದಿದ್ದು, 1 ಸಾವಿರ ಡಾಲರ್ ಟಿಪ್ಟ್ ಇಟ್ಟಿದ್ದಾರೆ.
ಗ್ರಾಹಕರು ಹೊರಟ ನಂತರ
ಇದನ್ನು ತೆರೆದು ನೋಡಿದ ಹೋಟೆಲ್ ನವರಿಗೆ ಅಚ್ಚರಿ ಕಾದಿತ್ತು.
ದುಬಾರಿ ಟಿಪ್ಸ್ ಕಂಡ ಹೋಟೆಲ್ ನವರು, ಅದರೊಳಗಿದ್ದ ಪತ್ರ ನೋಡಿ ಭಾವುಕರಾಗಿದ್ದಾರೆ. ರೆಸ್ಟೋರೆಂಟ್ ಮಾಲೀಕ ಅರ್ನಾಲ್ಡ್ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.