ನವದೆಹಲಿ: ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐ.ಆರ್.ಡಿ.ಎ.ಐ) ಗುಣಮಟ್ಟದ ಅಪಘಾತ ಆರೋಗ್ಯ ವಿಮಾ ಸೌಲಭ್ಯ ನೀಡುವಂತೆ ವಿಮಾ ಕಂಪನಿಗಳಿಗೆ ಸೂಚಿಸಿದೆ.
ಸಾಮಾನ್ಯ ಆರೋಗ್ಯ ವಿಮೆಯಲ್ಲಿ ವಿಭಿನ್ನ ಯೋಜನೆಗಳಿರುವ ಪಾಲಿಸಿಗಳನ್ನು ತರಲು ಪ್ರಾಧಿಕಾರ ಸೂಚಿಸಿದೆ. ಅಲ್ಲದೆ. ಅದಕ್ಕೆ ಸಂಬಂಧಪಟ್ಟ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
FDA ನೇಮಕಾತಿ ಪರೀಕ್ಷೆ ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ
ಸರಳ ಸುರಕ್ಷಾ ಭಿಮಾ ಯೋಜನಾ ಎಂದು ಅದಕ್ಕೆ ಹೆಸರಿಟ್ಟಿದ್ದು, ಕಂಪನಿಗಳು ಬೇಕಾದರೆ ಬೇರೆ ಹೆಸರನ್ನು ಇಟ್ಟುಕೊಳ್ಳಬಹುದಾಗಿದೆ. ಕನಿಷ್ಠ 2.5 ಲಕ್ಷದಿಂದ ಗರಿಷ್ಠ 1 ಕೋಟಿಯವರೆಗೆ ಸಮ್ ಅಶ್ಯೂರ್ಡ್ ಇರುವ ಯೋಜನೆಗಳಿರಬೇಕು ಎಂದು ಪ್ರಾಧಿಕಾರ ಸೂಚಿಸಿದೆ. ಅದರಂತೆ ಏಪ್ರಿಲ್1 ರಿಂದ ಈ ಮಾದರಿಯ ವಿಮಾ ಯೋಜನೆಯನ್ನು ಜಾರಿಗೆ ತರಲು ಕಂಪನಿಗಳು ಸಿದ್ಧತೆ ನಡೆಸಿವೆ.