ನವದೆಹಲಿ: ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಉದ್ಯಮಿ ಗೌತಮ್ ಅದಾನಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಕೊರೋನಾ ಆರ್ಥಿಕ ಬಿಕ್ಕಟ್ಟು, ಸಂಕಷ್ಟದ ಸಂದರ್ಭದಲ್ಲಿ ಬಹುತೇತಕರ ಆದಾಯ ಕ್ಷೀಣಿಸುತ್ತಿದೆ. ಉದ್ಯಮ, ಅನೇಕರ ವ್ಯವಹಾರಗಳು ಬಂದ್ ಆಗಿವೆ. ಇದೇ ಸಂದರ್ಭದಲ್ಲಿ ಉದ್ಯೋಗ ಕಡಿತ ಸೇರಿದಂತೆ ಅನೇಕ ಸವಾಲುಗಳು ಎದುರಾಗಿದ್ದು ಇವುಗಳ ನಡುವೆ ಉದ್ಯಮ ಸಾಮ್ರಾಜ್ಯ ವಿಸ್ತರಿಸಿ ಆದಾಯ ಗಳಿಸಿದ ಭಾರತದ ಉದ್ಯಮಿ ಗೌತಮ್ ಅದಾನಿ ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಚೀನಾದ ಜೋಂಗ್ ಶನ್ಯಾನ್ ಉದ್ಯಮಿ ಹಿಂದಿಕ್ಕಿದ ಗೌತಮ್ ಅದಾನಿ ಎರಡನೇ ಸ್ಥಾನಕ್ಕೇರಿದ್ದಾರೆ. ಬ್ಲೂಂಬರ್ಗ್ ನಿಲಯನೇರ್ ಬಿಡುಗಡೆ ಮಾಡಿದ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದು, ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಆಸ್ತಿ ಮೌಲ್ಯ 4,85,77,98,400 ರೂಪಾಯಿಗೆ ಏರಿಕೆಯಾಗಿದೆ. ಅದಾನಿ ಎಂಟರ್ಪ್ರೈಸಸ್, ಅದಾನಿ ಗ್ರೀನ್, ಅದಾನಿ ಗ್ಯಾಸ್, ಅದಾನಿ ಟ್ರಾನ್ಸ್ ಮಿಷನ್ ಶೇರುಗಳು ಏರಿಕೆ ಕಂಡಿದ್ದರ ಪರಿಣಾಮ ಅವರು ಎರಡನೇ ಸ್ಥಾನಕ್ಕೇರಿದ್ದಾರೆ.