![](https://kannadadunia.com/wp-content/uploads/2016/11/Ambani-Adani-demonetisation.jpg)
ನವದೆಹಲಿ: ಕೊರೋನಾ ಕಾರಣದಿಂದ ಜನಸಾಮಾನ್ಯರು ತತ್ತರಿಸಿರುವ ಹೊತ್ತಲ್ಲೇ ಶ್ರೀಮಂತರ ಸಂಖ್ಯೆ ಹೆಚ್ಚಾಗತೊಡಗಿದೆ.
ಹುರೂನ್ ಸಂಸ್ಥೆಯಿಂದ ನಡೆಸಲಾದ ಸಮೀಕ್ಷೆಯನ್ವಯ ಭಾರೀ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಅದಾನಿ ಕುಟುಂಬದ ನಿತ್ಯದ ಆದಾಯ 1000 ಕೋಟಿ ರೂಪಾಯಿ, ಅಂಬಾನಿ ಕುಟುಂಬದ ನಿತ್ಯದ ಗಳಿಕೆ 163 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
ಭಾರತದ ಕುಬೇರರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಅವರ ಆಸ್ತಿಯ ಮೌಲ್ಯ 7.18 ಲಕ್ಷ ಕೋಟಿ ರೂಪಾಯಿ ಆಗಿದೆ. ಎರಡನೇ ಸ್ಥಾನದಲ್ಲಿರುವ ಗೌತಮ್ ಅದಾನಿ ಕುಟುಂಬದ ಆಸ್ತಿ 5.09 ಲಕ್ಷ ಕೋಟಿ ರೂಪಾಯಿ. ಅದಾನಿ ಅವರ ಆಸ್ತಿ ಒಂದು ವರ್ಷದಲ್ಲಿ 3.65 ಲಕ್ಷ ಕೋಟಿ ರೂ.ನಷ್ಟು ಏರಿಕೆಯಾಗಿದೆ. ಇವರಿಬ್ಬರು ಏಷ್ಯಾ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನಗಳಲ್ಲಿದ್ದಾರೆ.