ಬೆಂಗಳೂರು: ಗಾರ್ಮೆಂಟ್ಸ್ ನೌಕರರಿಗೆ ಇನ್ನು ಮುಂದೆ 8,800 ನಿಂದ 13,200 ರೂ. ವೇತನ ಸಿಗಲಿದೆ. ಕಾರ್ಮಿಕ ಇಲಾಖೆ ವತಿಯಿಂದ ಗಾರ್ಮೆಂಟ್ಸ್ ನೂಲುವ ಗಿರಣಿ, ರೇಷ್ಮೆ ಬಟ್ಟೆ ಹಾಗೂ ಬಟ್ಟೆಗೆ ಬಣ್ಣ ಹಾಕುವ ಡೈ ಕಾರ್ಖಾನೆಗಳ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಮಾಡಿ ಆದೇಶಿಸಲಾಗಿದೆ.
2019ರಲ್ಲಿ ನಿಗದಿಪಡಿಸಿದ್ದ ಕನಿಷ್ಠ ವೇತನವನ್ನು ಶೇಕಡ 14 ರಷ್ಟು ಹೆಚ್ಚಳ ಮಾಡಲಾಗಿದ್ದು, ಕಾರ್ಮಿಕರಿಗೆ ಕನಿಷ್ಠ 8883 ರೂ.ನಿಂದ 13,239 ರೂಪಾಯಿ ಸಿಗಲಿದೆ. ಗಾರ್ಮೆಂಟ್ಸ್ ಗಳಲ್ಲಿ ಇನ್ನು ಮುಂದೆ ಪುರುಷರು, ಮಹಿಳೆಯರು, ತೃತೀಯಲಿಂಗಗಳಿಗೆ ಸಮಾನ ವೇತನ ನೀಡಲಾಗುವುದು. ಒಂದು ದಿನದ ಕೆಲಸಕ್ಕೆ 8 ತಾಸು ಕೆಲಸ ಅವಧಿ ನಿಗದಿ ಮಾಡಲಾಗಿದೆ.
ಗಾರ್ಮೆಂಟ್ಸ್ ವಿನ್ಯಾಸ ಹಾಗೂ ಟೈಲರಿಂಗ್ ಉದ್ದಿಮೆಗಳಲ್ಲಿನ ಅತಿ ಕುಶಲ ಕಾರ್ಮಿಕರಿಗೆ 10,990, ಕುಶಲ ಕಾರ್ಮಿಕರಿಗೆ 10,659 ರೂ., ಅರೆ ಕುಶಲ ಕಾರ್ಮಿಕರಿಗೆ 10,397 ರೂ., ಕೌಶಲ್ಯವಿಲ್ಲದ ಸಿಬ್ಬಂದಿಗೆ 10,130 ರೂ. ಕನಿಷ್ಠ ವೇತನ ನಿಗದಿ ಮಾಡಲಾಗಿದೆ.