ನವದೆಹಲಿ: ಇಂಟರ್ನೆಟ್ ದಟ್ಟಣೆ ತಗ್ಗಿಸುವ ಉದ್ದೇಶದಿಂದ 50 ರೂಪಾಯಿ ಒಳಗಿನ ಗೇಮಿಂಗ್ ವ್ಯವಹಾರಕ್ಕೆ ಯುಪಿಐ ನಿಷೇಧ ಹೇರಲು ಮುಂದಾಗಿದೆ.
ಆನ್ಲೈನ್ ಗೇಮ್ ಅಪ್ಲಿಕೇಷನ್ ಗಳಿಗೆ ಯುಪಿಐ ಮೂಲಕ ಹಣ ಪಾವತಿಸುವ ವ್ಯವಸ್ಥೆ ಮೇಲೆ ಕಡಿವಾಣ ಹಾಕಲು ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್(NPCI) ಇಂತಹುದೊಂದು ಕ್ರಮ ಕೈಗೊಳ್ಳಲು ಮುಂದಾಗಿದೆ.
ಆನ್ಲೈನ್ ಆಪ್ ಗಳಿಗೆ ಭಾರಿ ಪ್ರಮಾಣದ ಹಣ ಪಾವತಿ ಮಾಡಲಾಗುತ್ತದೆ. ಇದರಿಂದಾಗಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(UPI) ವ್ಯವಸ್ಥೆ ಮೇಲೆ ಭಾರೀ ಒತ್ತಡ ಉಂಟಾಗುತ್ತಿದೆ. ಇತ್ತೀಚೆಗೆ ಇಂಟರ್ನೆಟ್ ದಟ್ಟಣೆ ಹೆಚ್ಚಾಗಿ ಯುಪಿಐ ವ್ಯವಸ್ಥೆಯಲ್ಲಿ ಹಲವು ಸಲ ವ್ಯತ್ಯಯವಾಗುತ್ತಿದೆ. ಇದನ್ನು ಕಡಿಮೆ ಮಾಡಿ ಯುಪಿಐ ವ್ಯವಸ್ಥೆ ರಕ್ಷಿಸಿಕೊಳ್ಳಲು ಗೇಮಿಂಗ್ ಅಪ್ಲಿಕೇಷನ್ ಗಳಿಗೆ 50 ರೂಪಾಯಿಗಿಂತ ಕಡಿಮೆ ಮೊತ್ತದ ಹಣ ಪಾವತಿ ಮಾಡುವುದನನ್ನು ಯುಪಿಐ ವ್ಯವಸ್ಥೆ ಮೂಲಕ ಪಾವತಿಗೆ ನಿರಾಕರಿಸಲು ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಮುಂದಾಗಿದೆ.
ಇದರ ಬದಲಿಗೆ ಗೇಮಿಂಗ್ ಆಪ್ ಗಳನ್ನು ಸ್ಟಾಂಡಿಂಗ್ ಇನ್ಸ್ಟ್ರಕ್ಷನ್ ಆಧಾರಿತವಾಗಿ ಪಾವತಿ ವ್ಯವಸ್ಥೆಗಳಾದ ನೆಟ್ ಬ್ಯಾಂಕಿಂಗ್ ಮೂಲಕ ಬಳಸಿಕೊಳ್ಳಬಹುದು. ಅಂದ ಹಾಗೆ, ಲಾಕ್ಡೌನ್ ನಂತರದಲ್ಲಿ ಆನ್ಲೈನ್ ವರ್ಗಾವಣೆ ಹೆಚ್ಚಾಗಿದೆ. ಅದೇ ವೇಳೆ ಯುಪಿಐ ವಹಿವಾಟಿನ ಮೇಲೆ ಒತ್ತಡ ಜಾಸ್ತಿಯಾಗಿದೆ. ಹೀಗಾಗಿ ಇಂಟರ್ನೆಟ್ ದಟ್ಟಣೆ ತಗ್ಗಿಸುವ ಉದ್ದೇಶದಿಂದ 50 ರೂಪಾಯಿ ಒಳಗಿನ ಗೇಮಿಂಗ್ ವ್ಯವಹಾರಕ್ಕೆ ಯುಪಿಐ ನಿಷೇಧ ಹೇರಲು ಮುಂದಾಗಿದೆ ಎಂದು ಹೇಳಲಾಗಿದೆ.