ಸ್ಯಾಮ್ಸಂಗ್ ತನ್ನ ಹೊಸ ಗ್ಯಾಲಕ್ಸಿ ಎಂ 51 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ನ ಆಕರ್ಷಣೆಯೆಂದ್ರೆ ಬ್ಯಾಟರಿ. ಈ ಫೋನ್ 7,000ಎಂಎಎಚ್ ಬ್ಯಾಟರಿಯನ್ನು ಹೊಂದಿದೆ.
ಗ್ಯಾಲಕ್ಸಿ ಎಂ51, 25W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡುತ್ತದೆ. ಈ ಫೋನ್ ಒಮ್ಮೆ ಫುಲ್ ಚಾರ್ಜ್ ಆದ್ರೆ 64 ಗಂಟೆಗಳ ಕಾಲ ನಿರಂತರವಾಗಿ ಚಾಲ್ತಿಯಲ್ಲಿರಲಿದೆ. 24 ಗಂಟೆಗಳ ಕಾಲ ನಿರಂತರವಾಗಿ ಇಂಟರ್ನೆಟ್ ಸಹ ಬಳಸಬಹುದು ಎಂದು ಕಂಪನಿ ಹೇಳಿದೆ. ಫೋನ್ ನಲ್ಲಿ 34 ಗಂಟೆಗಳ ಕಾಲ ನಿರಂತರವಾಗಿ ವೀಡಿಯೊವನ್ನು ವೀಕ್ಷಿಸಬಹುದು ಮತ್ತು 182 ಗಂಟೆಗಳ ಕಾಲ ನಿರಂತರವಾಗಿ ಸಂಗೀತವನ್ನು ಕೇಳಬಹುದು ಎಂದು ಕಂಪನಿ ಹೇಳಿದೆ.
ಗ್ಯಾಲಕ್ಸಿ ಎಂ 51 ರ ಮೂಲ ರೂಪಾಂತರದ ಬೆಲೆ 24,999 ರೂಪಾಯಿ. 8 ಜಿಬಿ ರ್ಯಾಮ್ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ಫೋನ್ ಬೆಲೆ 26,999 ರೂಪಾಯಿ. ಈ ಸ್ಮಾರ್ಟ್‌ಫೋನ್ ಕಪ್ಪು ಮತ್ತು ನೀಲಿ ರೂಪಾಂತರಗಳಲ್ಲಿ ಲಭ್ಯವಿದೆ. ಇದನ್ನು ಸೆಪ್ಟೆಂಬರ್ 18 ರಿಂದ ಅಮೆಜಾನ್ ಮತ್ತು ಸ್ಯಾಮ್‌ಸಂಗ್ ವೆಬ್‌ಸೈಟ್ ಸೇರಿದಂತೆ ಚಿಲ್ಲರೆ ಅಂಗಡಿಗಳಲ್ಲಿ ಖರೀದಿಸಬಹುದು.
ಕಂಪನಿ ಫೋನ್ ಜೊತೆ ಆಫರ್ ನೀಡ್ತಿದೆ. ಎಚ್‌ಡಿಎಫ್‌ಸಿ ಕಾರ್ಡ್ ಬಳಕೆದಾರರಿಗೆ 2,000 ರೂಪಾಯಿಗಳ ತ್ವರಿತ ರಿಯಾಯಿತಿ ಸಿಗಲಿದೆ. ಫೋನ್ ಎರಡು ಸ್ಲಿಮ್ ಸ್ಲಾಟ್ ಹೊಂದಿದೆ.