ನವದೆಹಲಿ: ಸರ್ಕಾರಿ ತೈಲ ಮಾರಾಟ ಕಂಪನಿಗಳು ಡೀಸೆಲ್ ಬೆಲೆಯನ್ನು ಪರಿಷ್ಕರಿಸಿದ್ದು, ಒಂದು ಲೀಟರ್ಗೆ 13 ರಿಂದ 18 ಪೈಸೆಯಷ್ಟು ಹೆಚ್ಚಳ ಮಾಡಿವೆ. ಆದರೆ, ಪೆಟ್ರೋಲ್ ದರ ಬದಲಾಗದೇ ಉಳಿದಿದೆ.
ಮೇ 4 ರಿಂದ 40 ನೇ ಬಾರಿಗೆ ಇಂಧನ ದರ ಪರಿಷ್ಕರಣೆಯಾಗಿದೆ. ಈ ಅವಧಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 11.14 ರೂ., ಡೀಸೆಲ್ ದರ ಲೀಟರ್ ಗೆ 9.14 ರೂ.ಗೆ ಏರಿದೆ.
ಸ್ಥಳೀಯ ತೆರಿಗೆಗಳಾದ ವ್ಯಾಟ್ ಮತ್ತು ಸರಕು ಶುಲ್ಕದ ಆಧಾರದ ಮೇಲೆ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರಾಜಸ್ಥಾನ ಅತಿ ಹೆಚ್ಚು ವ್ಯಾಟ್ ವಿಧಿಸುತ್ತಿದ್ದರೆ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳು ನಂತರದ ಸ್ಥಾನದಲ್ಲಿವೆ.
ದರ ಪರಿಷ್ಕರಣೆ ನಂತರ ದೆಹಲಿಯಲ್ಲಿ ಡೀಸೆಲ್ ದರ ಲೀಟರ್‌ಗೆ 89.87 ರೂ., ಮುಂಬೈಯಲ್ಲಿ 97.45 ರೂ., ಕೋಲ್ಕತ್ತಾದಲ್ಲಿ 93.02 ರೂ., ಚೆನ್ನೈನಲ್ಲಿ 94.39 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 107.83 ರೂ. ಇದೆ.