alex Certify ಪೆಟ್ರೋಲ್​ ಬೆಲೆ ಏರಿಕೆ ಹಿಂದಿನ ಕಾರಣ ಬಿಚ್ಚಿಟ್ಟ ಕೇಂದ್ರ ಸಚಿವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್​ ಬೆಲೆ ಏರಿಕೆ ಹಿಂದಿನ ಕಾರಣ ಬಿಚ್ಚಿಟ್ಟ ಕೇಂದ್ರ ಸಚಿವ

ಕೊರೊನಾ ವೈರಸ್​​ನಿಂದಾಗಿ ತೈಲ ಪೂರೈಸುವ ರಾಷ್ಟ್ರಗಳಲ್ಲಿ ಉತ್ಪಾದನೆ ಕಡಿಮೆಯಾಗಿದ್ದು ಇದರ ಪರಿಣಾಮದಿಂದಾಗಿ ತೈಲೋತ್ಪನ್ನಗಳ ಬೆಲೆ ಏರಿಕೆಯಾಗ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್​ ಮಾಹಿತಿ ನೀಡಿದ್ದಾರೆ.

ಕಡಿಮೆ ಪ್ರಮಾಣದ ತೈಲ ಉತ್ಪಾದನೆಯಿಂದಾಗಿ ಬೇಡಿಕೆ ಇನ್ನಷ್ಟು ಹೆಚ್ಚಾಗಿದ್ದು ಬೇಡಿಕೆ ಹಾಗೂ ಉತ್ಪಾದನೆಯ ಅಸಮತೋಲನವೇ ಬೆಲೆ ಏರಿಕೆಗೆ ಕಾರಣ ಎಂದು ಹೇಳಿದ್ರು.

ಕಚ್ಚಾ ತೈಲವನ್ನ ಪೂರೈಸಬೇಕಾದ ಅದೆಷ್ಟೋ ರಾಷ್ಟ್ರಗಳು ತೈಲೋತ್ಪನ್ನಗಳ ಉತ್ಪಾದನೆಯನ್ನೇ ನಿಲ್ಲಿಸಿವೆ. ಇನ್ನು ಕೆಲ ರಾಷ್ಟ್ರಗಳು ಬಹಳ ಕಡಿಮೆ ಪ್ರಮಾಣದ ತೈಲೋತ್ಪನ್ನಗಳನ್ನ ಪೂರೈಸುತ್ತಿವೆ. ಕೊರೊನಾ ಕಾರಣದಿಂದ ಉತ್ಪಾದನೆ ಹಾಗೂ ಬೇಡಿಕೆಯಲ್ಲಿ ಅಸಮತೋಲನ ಉಂಟಾಗುತ್ತಿದೆ. ಕೆಲ ತಿಂಗಳ ಹಿಂದಷ್ಟೇ 35-38 ಅಮೆರಿಕನ್​ ಡಾಲರ್​ನಷ್ಟಿದ್ದ ಕಚ್ಚಾ ತೈಲದ ಬೆಲೆ ಇದೀಗ 54-55 ಅಮೆರಿಕನ್​ ಡಾಲರ್​ಗೆ ಏರಿಕೆ ಕಂಡಿದೆ ಎಂದು ಧರ್ಮೇಂದ್ರ ಪ್ರಧಾನ್​ ಹೇಳಿದ್ರು.

ಅವಶ್ಯಕತೆ ಪ್ರಮಾಣದ ಶೇಕಡಾ 80ರಷ್ಟಾದರೂ ಕಚ್ಚಾ ತೈಲವನ್ನ ಆಮದು ಮಾಡಿಕೊಳ್ಳೋದೇ ನಮಗೀಗ ದೊಡ್ಡ ಸವಾಲಾಗಿದೆ. ಇಂಧನ ಬಳಕೆ ವಿಚಾರದಲ್ಲಿ ವಿಶ್ವದಲ್ಲೇ ಭಾರತ ಮೂರನೇ ಸ್ಥಾನದಲ್ಲಿದೆ. ಇಂಧನ ವಲಯದಲ್ಲಿ ಸ್ವಾವಲಂಬಿಗಳಾಗುವ ಸಲುವಾಗಿ ಎಲೆಕ್ಟ್ರಿಕ್​ ವಾಹನ, ಸೌರಶಕ್ತಿ, ಎಥೆನಾಲ್​ ಉತ್ಪಾದನೆ ಸೇರಿದಂತೆ ಇತರೆ ಮಾರ್ಗಗಳ ಮೇಲೆ ಹೆಚ್ಚು ಗಮನ ಹರಿಸಿದ್ದೇವೆ ಎಂದೂ ಅವರು ಹೇಳಿದ್ರು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...