ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗ ಬಿಕ್ಕಟ್ಟಿನ ನಡುವೆ ತೈಲಕಂಪನಿಗಳು ದೈನಂದಿನ ದರ ಪರಿಷ್ಕರಣೆ ಆರಂಭಿಸಿದ ನಂತರ ಸತತ 10 ನೇ ದಿನ ತೈಲ ಬೆಲೆಯನ್ನು ಪರಿಷ್ಕರಿಸಿವೆ.
ಪೆಟ್ರೋಲ್ ಬೆಲೆ ಲೀಟರ್ ಗೆ 47 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ಗೆ 93 ಪೈಸೆ ಹೆಚ್ಚಳ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧಿಸೂಚನೆಗಳ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ 76.73 ರೂಪಾಯಿ ಮತ್ತು ಡೀಸೆಲ್ ಲೀಟರ್ ಗೆ 75.19 ರೂಪಾಯಿ ಇದೆ.
ಸೋಮವಾರ ಪೆಟ್ರೋಲ್ ದರವನ್ನು 48 ಪೈಸೆ ಮತ್ತು ಡೀಸೆಲ್ ಅನ್ನು 59 ಪೈಸೆ ಹೆಚ್ಚಿಸಲಾಗಿತ್ತು.
ಇಂದು ಮೆಟ್ರೋ ನಗರಗಳು ಮತ್ತು ರಾಜ್ಯ ರಾಜಧಾನಿಗಳಲ್ಲಿ ಪೆಟ್ರೋಲ್ ಬೆಲೆ ಇಂತಿದೆ
ನಗರ ಇಂದಿನ ಬೆಲೆ ನಿನ್ನೆಯ ಬೆಲೆ
ನವದೆಹಲಿ 76.73 ರೂ. 76.26 ರೂ.
ಕೋಲ್ಕತಾ 78.55 ರೂ. 78.10 ರೂ.
ಮುಂಬೈ 83.62 ರೂ. 83.17 ರೂ.
ಚೆನ್ನೈ 80.41 ರೂ. 79.96 ರೂ.
ಬೆಂಗಳೂರು 79.22 ರೂ. 78.73 ರೂ.