![](https://kannadadunia.com/wp-content/uploads/2020/05/petrol-pump-it.jpg)
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆಯಲ್ಲಿ 25 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 21 ಪೈಸೆ ಏರಿಕೆಯಾಗಿದೆ.
ಈಗ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 80.38 ರೂಪಾಯಿಗಳಾಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 80.40 ರೂಪಾಯಿಗಳಾಗಿದೆ.
ಪೆಟ್ರೋಲ್ ಗಿಂತ ಡೀಸೆಲ್ ಬೆಲೆ 2 ಪೈಸೆ ಹೆಚ್ಚಾಗಿದೆ. ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ ಇದೇ ರೀತಿ ಮುಂದುವರೆದರೆ ಸಾರ್ವಜನಿಕ ಜನ ಜೀವನ ಮತ್ತಷ್ಟು ಕಷ್ಟಕರವಾಗಲಿದ್ದು, ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರು ತತ್ತರಿಸಿ ಹೋಗಿದ್ದಾರೆ.