ಇದು ಹಬ್ಬದ ಸೀಸನ್ ಆಗಿರೋದ್ರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿ ಅಂತಾ ಭಾರತೀಯ ರೈಲ್ವೇ ಇಲಾಖೆ ಅನೇಕ ಸ್ಪೆಷಲ್ ರೈಲುಗಳನ್ನ ಓಡಿಸುತ್ತಿದೆ. ಆದರೂ ಕೂಡ ಪ್ರಯಾಣಿಕರಿಗೆ ಟಿಕೆಟ್ಗಳನ್ನ ಪಡೆಯೋದು ಕಷ್ಟವಾಗುತ್ತಿದೆ.
ಹಬ್ಬದ ಸಂದರ್ಭದಲ್ಲಿ ಊರಿಗೆ ಬರುವವರ ಸಂಖ್ಯೆ ಜಾಸ್ತಿ ಇರೋದ್ರಿಂದ ರೈಲ್ವೇ ಟಿಕೆಟ್ ಕನ್ಫರ್ಮ್ ಆಗೋದೆ ಕಷ್ಟ. ಆದರೆ ಪ್ರಯಾಣಿಕರ ಸಮಸ್ಯೆಯನ್ನ ಪರಿಹರಿಸಲು ಮುಂದಾಗಿರುದ ರೈಲ್ವೆ ಇಲಾಖೆ ಜನನಿಬಿಡ ಪ್ರದೇಶಗಳಲ್ಲಿ ಇನ್ನಷ್ಟು ಹೆಚ್ಚಿನ ರೈಲುಗಳನ್ನ ಬಿಡಲು ಚಿಂತನೆ ನಡೆಸಿದೆ. ಪ್ರಯಾಣಿಕರ ಸಂಖ್ಯೆಯನ್ನ ವಿಶ್ಲೇಷಿಸಿದ ಬಳಿಕ ಭಾರತೀಯ ರೈಲ್ವೇ ಇಲಾಖೆ ಹೆಚ್ಚುವರಿ ರೈಲುಗಳನ್ನ ಬಿಡುವ ಸಾಧ್ಯತೆ ಇದೆ.
ಅಲ್ಲದೇ ಪ್ರಯಾಣಿಕರ ಸಮಸ್ಯೆಯನ್ನ ಕೊನೆಗೊಳಿಸುವ ಸಲುವಾಗಿ ಭಾರತೀಯ ರೈಲ್ವೇ ಇಲಾಖೆ ಬಿಡುವಿಲ್ಲದ ಮಾರ್ಗಗಳಲ್ಲಿ ಕ್ಲೋನ್ ಟ್ರೇನ್ಗಳನ್ನ ಬಿಡಲು ಮುಂದಾಗಿದೆ. ಈ ಕ್ಲೋನ್ ರೈಲುಗಳು ಮುಖ್ಯ ರೈಲುಗಳಿಗಿಂತ ಹೆಚ್ಚು ವೇಗವಾಗಿ ಸಂಚರಿಸುತ್ತವೆ.
ಅಲ್ಲದೇ ವೇಟ್ ಲೀಸ್ಟ್ಗೆ ತಕ್ಕಂತೆ ಇದಕ್ಕೆ ಆಸನವನ್ನ ಒದಗಿಸಬಹುದಾಗಿದೆ. ಪ್ರಯಾಣಿಕರಿಗೆ ಸಂಖ್ಯೆಗೆ ತಕ್ಕಂತೆ ರೈಲಿಗೆ ಬೋಗಿಗಳನ್ನ ಅಳವಡಿಸಲಾಗುತ್ತೆ. ಇದು ಮಾತ್ರವಲ್ಲದೇ ಕ್ಲೋನ್ ರೈಲುಗಳು ನಾನ್ ಸ್ಟಾರ್ ರೈಲುಗಳಾದ್ದರಿಂದ ಕೊರೊನಾ ಸಮಯದಲ್ಲಿ ರೈಲಿನಲ್ಲಿ ಹೆಚ್ಚು ಅವಧಿ ಇರಲು ಬಯಸದ ಪ್ರಯಾಣಿಕರು ಇದರಲ್ಲಿ ಸಂಚಾರ ಮಾಡಬಹುದಾಗಿದೆ.