ಬಾರ್ಸಿಲೋನಾ: ಕೋವಿಡ್ ತಡೆಯಲು ಹಲವು ದೇಶಗಳಲ್ಲಿ ಮಾಡಿದ ಲಾಕ್ ಡೌನ್ ಅದೆಷ್ಟೋ ಉದ್ಯಮಗಳನ್ನು ಬುಡಮೇಲು ಮಾಡಿದೆ. ಕೋಟಿ, ಕೋಟಿ ನಷ್ಟ ಮಾಡಿದೆ. ಹಾಗೆ ಉದ್ಯಮದಲ್ಲಿ ನಷ್ಟ ಅನುಭವಿಸಿದ ಮಹಿಳೆಯರು ಹೊಸದೊಂದು ಪರ್ಯಾಯ ಉದ್ಯಮ ಪ್ರಾರಂಭಿಸಿ ಸೈ ಎನಿಸಿಕೊಂಡಿದ್ದಾರೆ.
ಸ್ಪೇನ್ ನ ಬಾರ್ಸಿಲೋನಾದ 41 ವರ್ಷದ ಅರಿದ್ನಾ ಸೆರಾ ಹಾಗೂ ಇತರ ಐವರು ಮಹಿಳೆಯರು ಈ ಹಿಂದೆ ವಿದೇಶಿ ಪ್ರವಾಸಿಗರಿಗೆ ಸೈಕಲ್ ಒದಗಿಸುವ ಉದ್ಯೋಗ ಮಾಡುತ್ತಿದ್ದರು. ಲಾಕ್ ಡೌನ್ ನಿಂದ ಪ್ರವಾಸೋದ್ಯಮ ಸಂಪೂರ್ಣ ಬಂದಾಗಿತ್ತು. ಮಹಿಳೆಯರು ಉದ್ಯೋಗವಿಲ್ಲದಂತಾದರು.ಆದರೆ, ಧೃತಿಗೆಡದ ಮಹಿಳೆಯರು ಪರ್ಯಾಯ ಉದ್ಯೋಗ ಕಂಡುಕೊಂಡಿದ್ದಾರೆ.
ಬೈಕ್ ಮೂಲಕ ವಸ್ತುಗಳನ್ನು ಸ್ಪೇನ್, ಫ್ರಾನ್ಸ್ ಹಾಗೂ ಅರ್ಜಂಟೀನಾದ ಮನೆಗಳಿಗೆ ವಿತರಿಸುವ ಲೆಸ್ ಮರ್ಸಿಡಿಸ್ ಎಂಬ ಕಂಪನಿಯನ್ನು ಜುಲೈನಲ್ಲಿ ಹುಟ್ಟು ಹಾಕಿದ್ದಾರೆ. ಇದು ಕೇವಲ ಡೆಲಿವರಿ ಕಂಪನಿ ಮಾತ್ರವಲ್ಲ. ನಾವು ಮುಂದಿನ ಯೋಚನೆ ಮಾಡಿದ್ದೇವೆ ಎಂದು ಸೆರಾ ಹೇಳಿದ್ದಾರೆ.
ಕಂಪನಿಯ ಕೇಂದ್ರ ಕಚೇರಿ ಬಾರ್ಸಿಲೋನಾ ಹಳೆಯ ಪಟ್ಟಣ. ಉತ್ತಮ ವಾತಾವರಣವಿರುವ ಹಾಗೂ ಮಹಿಳಾ ಸ್ನೇಹಿ ನಗರವಾಗಿದೆ. ನಮ್ಮದು ಅಮೇಜಾನ್ ಹಾಗೂ ಗ್ಲೋವೋದಂತ ದೈತ್ಯ ಕಂಪನಿಗಳಿಗೆ ಪರ್ಯಾಯವಾಗಿದೆ ಎಂದು ಸೆರಾ ಹೇಳಿದ್ದಾರೆ.