ಬರುವ ಡಿಸೆಂಬರ್ 1ರಿಂದ ಎಲ್‌ಪಿಜಿ ಸಿಲಿಂಡರ್, ಆರ್‌ಟಿಜಿಎಸ್ ಪಾವತಿ ಸೇರಿದಂತೆ ಜನ ಸಾಮಾನ್ಯರ ಬದುಕುಗಳ ಮೇಲೆ ಪರಿಣಾಮ ಬೀರುವಂಥ ಕೆಲವೊಂದು ಬದಲಾವಣೆಗಳು ಜಾರಿಗೆ ಬರಲಿವೆ.
ಡಿಸೆಂಬರ್ 2020ರಿಂದ ದಿನದ 24 ಗಂಟೆಯೂ ಆರ್‌ಟಿಜಿಎಸ್ ಸೌಲಭ್ಯ ಲಭ್ಯವಿದೆ ಎಂದು ರಿಸರ್ವ್ ಬ್ಯಾಂಕ್ ಕಳೆದ ಅಕ್ಟೋಬರ್‌ನಲ್ಲೇ ಘೋಷಿಸಿದ್ದು, ಮುಂದಿನ ವಾರದಿಂದ ಅನುಷ್ಠಾನಕ್ಕೆ ಬರಲಿದೆ. ಸದ್ಯ, ವಾರದ ಪ್ರತಿದಿನವೂ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಆರ್‌ಟಿಜಿಎಸ್ ಸೌಲಭ್ಯವಿದೆ. ದೊಡ್ಡ ಮೊತ್ತಗಳ ರಿಯಲ್ ಟೈಮ್ ವರ್ಗಾವಣೆಗೆ ಆರ್‌ಟಿಜಿಎಸ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಪ್ರತಿ ತಿಂಗಳ ಮೊದಲ ದಿನದಂದು ಇಡೀ ತಿಂಗಳಿಗೆ ಅನ್ವಯವಾಗುವಂತೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ನಿಗದಿ ಪಡಿಸಲಿವೆ. ಈ ಬಗ್ಗೆ ಒಎನ್‌ಜಿಸಿ ಮಹತ್ವದ ಘೋಷಣೆಯೊಂದನ್ನು ಶೀಘ್ರವೇ ಮಾಡುವ ನಿರೀಕ್ಷೆಯಿದೆ.
ಇದೇ ಅವಧಿಯಿಂದ ಇನ್ನಷ್ಟು ರೈಲುಗಳ ಸೇವೆಯನ್ನು ಪುನಾರಂಭ ಮಾಡುವ ಆಲೋಚನೆಯನ್ನು ಭಾರತೀಯ ರೈಲ್ವೇ ಮಾಡುತ್ತಿದೆ. ಪ್ರಮುಖ ಮಾರ್ಗಗಳಲ್ಲಿ ಓಡಾಡುವ ಕೆಲವೊಂದು ಮೇಲ್/ಎಕ್ಸ್‌ಪ್ರೆಸ್ ರೈಲುಗಳು ಮತ್ತೆ ತಂತಮ್ಮ ಮಾರ್ಗಗಳಿಗೆ ಇಳಿಯುವ ನಿರೀಕ್ಷೆಯಿದೆ. ಇನ್ನೊಂದು ವಾರದ ಒಳಗೆ ಈ ಸಂಬಂಧ ಮಹತ್ವದ ಘೋಷಣೆಯ ಸಾಧ್ಯತೆ ಇದೆ.