ನವದೆಹಲಿ: ಮಾರ್ಚ್ 1 ರಿಂದ ದೇಶದಲ್ಲಿ ಕೆಲ ಹೊಸ ಅಂಶಗಳು ಜಾರಿಗೆ ಬರಲಿವೆ. ಎಟಿಎಂ, ಎಲ್.ಪಿ.ಜಿ. ಗ್ಯಾಸ್ ನಿಂದ ಹಿಡಿದು ಜನರ ನಿತ್ಯ ಬಳಕೆಯ ವಸ್ತುಗಳ ಬಗೆಗಿನ ಮಹತ್ವದ ಬದಲಾವಣೆಯ ಮಾಹಿತಿ ಇಲ್ಲಿದೆ.
ಎಸ್.ಬಿ.ಐ. ಖಾತೆಗಳು ಊರ್ಜಿತಾವಸ್ಥೆಯಲ್ಲಿರಬೇಕು ಎಂದರೆ ಗ್ರಾಹಕರು ಕೆವೈಸಿ ನೀಡುವುದನ್ನು ಕಡ್ಡಾಯ ಮಾಡಿದೆ.
ಇಂಡಿಯನ್ ಬ್ಯಾಂಕ್ ಎಟಿಎಂಗಳಲ್ಲಿ ಮಾರ್ಚ್ 1 ರಿಂದ 2 ಸಾವಿರ ಮುಖಬೆಲೆಯ ನೋಟುಗಳು ಸಿಗುವುದಿಲ್ಲ. ಹಾಗೊಮ್ಮೆ ಬಂದರೂ ಬ್ಯಾಂಕ್ ಕೌಂಟರ್‌ನಲ್ಲಿ ಅದನ್ನು ಬದಲಾಯಿಸಿ ನೀಡಲಾಗುತ್ತದೆ. ಸರ್ಕಾರ 2 ಸಾವಿರ ಮುಖಬೆಲೆಯ ನೋಟುಗಳನ್ನು ಮುದ್ರಿಸುವುದಿಲ್ಲ ಎಂದು ಹೇಳಿದ್ದರಿಂದ ಈ ಕ್ರಮ ವಹಿಸಲಾಗಿದೆ.
ಚಳಿಗಾಲ ಕಳೆಯುತ್ತಿದ್ದಂತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಬಹುದು ಎಂದು ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಮಾರ್ಚ್ 1 ರಿಂದ ಬೆಲೆ ಇಳಿಕೆಯಾಗಬಹುದು ಎಂಬ ನಿರೀಕ್ಷೆ ಇದೆ.
ಎಲ್ಪಿಜಿ ಗ್ಯಾಸ್ ಬೆಲೆ ಪ್ರತಿ ತಿಂಗಳ ಮೊದಲ ದಿನ ಘೋಷಣೆಯಾಗುತ್ತದೆ. ಆದರೆ ಕಚ್ಚಾ ತೈಲ ದರ ಹೆಚ್ಚಳದಿಂದ ಫೆಬ್ರವರಿಯಲ್ಲಿ ಮೂರು ಬಾರಿ ಗೃಹ ಬಳಕೆ ಸಿಲಿಂಡರ್ ಬೆಲೆ ಏರಿಕೆಯಾಗಿತ್ತು.