ಏಪ್ರಿಲ್ ತಿಂಗಳು ಮುಗಿದು ಮೇ ತಿಂಗಳು ಶುರುವಾಗ್ತಿದೆ. ತಿಂಗಳ ಆರಂಭದಲ್ಲಿ ಕೆಲ ಸೇವೆಗಳು ಬದಲಾಗಲಿವೆ. ಇದು ನೇರವಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ.
ಎಂದಿನಂತೆ ಮೇ ತಿಂಗಳ ಮೊದಲ ದಿನ ಕೂಡ ತೈಲ ಕಂಪನಿಗಳು ಸಿಲಿಂಡರ್ ಬೆಲೆಯನ್ನು ನಿರ್ಧರಿಸಲಿವೆ. ಮೇ ತಿಂಗಳ ಮೊದಲ ದಿನವೇ ಸಿಲಿಂಡರ್ ಬೆಲೆ ನಿಗದಿಯಾಗಲಿದೆ.
ಮೇ ತಿಂಗಳಿನಲ್ಲಿ ಬ್ಯಾಂಕ್ ಗಳು 14 ದಿನಗಳ ಕಾಲ ಬಾಗಿಲು ಮುಚ್ಚಲಿದೆ. ಮೇ 1ರಂದು ಕಾರ್ಮಿಕ ದಿನವಾಗಿದ್ದು, ಬ್ಯಾಂಕ್ ಗೆ ರಜೆ. ಮೇ 2ರಂದು ಭಾನುವಾರವಾಗಿದ್ದು, ಬ್ಯಾಂಕ್ ಬಂದ್ ಆಗಲಿದೆ. ಆರ್ಬಿಐ ವೆಬ್ಸೈಟ್ ಪ್ರಕಾರ ಮೇ ತಿಂಗಳಿನಲ್ಲಿ ಐದು ದಿನ ಬ್ಯಾಂಕ್ ಬಂದ್ ಇರಲಿದೆ. ಆದ್ರೆ ಎಲ್ಲ ರಾಜ್ಯಗಳ ಬ್ಯಾಂಕ್ ಮುಚ್ಚಿರುವುದಿಲ್ಲ. ಆಯಾ ರಾಜ್ಯದ ಹಬ್ಬಗಳನ್ನು ಆಧರಿಸಿ ರಜೆ ನೀಡಲಾಗುತ್ತದೆ.
ವಿಮಾ ನಿಯಂತ್ರಕವು ಆರೋಗ್ಯ ಸಂಜೀವನಿ ಪಾಲಿಸಿಯ ವ್ಯಾಪ್ತಿಯನ್ನು ವಿಸ್ತರಿಸಿದೆ. ಎಲ್ಲಾ ಕಂಪನಿಗಳು 50 ಸಾವಿರದಿಂದ 10 ಲಕ್ಷ ರೂಪಾಯಿಗಳವರೆಗಿನ ಮ್ಯಾಂಡೇಟರಿ ಇನ್ಶುರೆನ್ಸ್ ಪಾಲಿಸಿಯ ಉತ್ಪನ್ನಗಳನ್ನು ನೀಡಬೇಕಾಗುತ್ತದೆ. ಕಳೆದ ವರ್ಷ ಏಪ್ರಿಲ್ 1 ರಿಂದ ಪ್ರಾರಂಭವಾದ ಆರೋಗ್ಯ ಸಂಜೀವನಿ ಸ್ಟ್ಯಾಂಡರ್ಡ್ ಪಾಲಿಸಿಯ ಗರಿಷ್ಠ ವ್ಯಾಪ್ತಿ 5 ಲಕ್ಷ ರೂಪಾಯಿ. ಹಿಂದಿನ ವರ್ಷ ಜುಲೈನಲ್ಲಿಯೇ ಈ ನೀತಿ ಜಾರಿಗೆ ತರಲು ಸೂಚನೆ ನೀಡಲಾಗಿತ್ತು. ಆದ್ರೆ ವಿಮಾ ಕಂಪನಿಗಳು ಆಸಕ್ತಿ ತೋರದ ಕಾರಣ ಮೇವರೆಗೆ ಅವಕಾಶ ನೀಡಲಾಗಿತ್ತು.
ಆಕ್ಸಿಸ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರೆ ನಿಮಗೊಂದು ಬೇಸರದ ಸುದ್ದಿಯಿದೆ. ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಕೆಲವು ಸೇವೆಗಳು ದುಬಾರಿಯಾಗಲಿವೆ. ಎಟಿಎಂನಿಂದ ಹಣ ಹಿಂತೆಗೆದುಕೊಳ್ಳುವ ಶುಲ್ಕದಿಂದ ಹಿಡಿದು ಕನಿಷ್ಠ ಠೇವಣಿ ಶುಲ್ಕ ಕೂಡ ಹೆಚ್ಚಾಗಲಿದೆ.