ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಬೆಳವಣಿಗೆಯಿಂದಾಗಿ ಗೃಹೋಪಯೋಗಿ ವಸ್ತುಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಲೋಹಗಳ ಬೆಲೆ ಇಳಿಮುಖವಾಗಿದೆ. ಗೃಹೋಪಯೋಗಿ ವಸ್ತುಗಳ ಉತ್ಪಾದಕರು ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದ್ದು, ವಾಷಿಂಗ್ ಮಷೀನ್, ರೆಫ್ರಿಜರೇಟರ್, ಮೈಕ್ರೋವೇವ್, ಎಸಿ ಮೊದಲಾದವುಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.
ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮ ಕಚ್ಚಾ ವಸ್ತುಗಳ ದರ ಏರಿಕೆಯಾಗಿತ್ತು. ಈ ವರ್ಷದ ಏಪ್ರಿಲ್ ನಲ್ಲಿ ಇದ್ದ ದರಕ್ಕಿಂತ ಈಗಿನ ದರ ಕಡಿಮೆಯಾಗಿದೆ. ತಾಮ್ರ ಶೇಕಡ 21ರಷ್ಟು, ಅಲ್ಯೂಮಿನಿಯಂ ಶೇಕಡ 36 ರಷ್ಟು, ಉಕ್ಕುದರ ಶೇಕಡ 19 ರಷ್ಟು ಕಡಿಮೆಯಾಗಿದೆ. ಗ್ರಾಹಕರಿಗೆ ಇದರ ಲಾಭ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.