ನವದೆಹಲಿ: ಇಎಸ್ಐ ಸೌಲಭ್ಯವನ್ನು ಖಾಸಗಿ ಆಸ್ಪತ್ರೆಗಳಲ್ಲಿಯೂ ಪಡೆಯಬಹುದಾಗಿದೆ. ಇಎಸ್ಐ ಆರೋಗ್ಯ ವಿಮೆ ಹೊಂದಿದವರು ತಮ್ಮ ಮನೆಯಿಂದ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಇಎಸ್ಐ ಆಸ್ಪತ್ರೆ ಇಲ್ಲದಿದ್ದರೆ ರಾಜ್ಯ ವಿಮಾ ನಿಗಮದ ಜೊತೆ ಒಪ್ಪಂದ ಮಾಡಿಕೊಂಡ ಖಾಸಗಿ ಆಸ್ಪತ್ರೆಗಳಲ್ಲಿಯೂ ಆರೋಗ್ಯ ಸೇವೆ ಪಡೆಯಬಹುದಾಗಿದೆ.
ಕೇಂದ್ರ ಕಾರ್ಮಿಕ ಸಚಿವಾಲಯದಿಂದ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಇಎಸ್ಐ ವ್ಯಾಪ್ತಿ ನೌಕರರ ಸಂಖ್ಯೆ ಹೆಚ್ಚಳವಾಗಿದೆ. ಇದನ್ನು ಗಮನಿಸಿ ನೌಕರರ ಮನೆಯ ಸಮೀಪದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಮೂಲಸೌಕರ್ಯಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಇಎಸ್ಐ ಇ – ಪೆಹಚಾನ್ ಕಾರ್ಡ್ ಅಥವಾ ಆರೋಗ್ಯ ಪಾಸ್ಬುಕ್, ಆಧಾರ್ ಕಾರ್ಡ್ ಅಥವಾ ಸರ್ಕಾರದ ಯಾವುದಾದರೂ ಗುರುತಿನ ಚೀಟಿ ನೀಡಿ ನಗದು ರಹಿತವಾಗಿ ಖಾಸಗಿ ಆಸ್ಪತ್ರೆಯಲ್ಲಿಯೂ ಸೌಲಭ್ಯ ಪಡೆಯಬಹುದು ಎಂದು ಹೇಳಲಾಗಿದೆ.