
ಉಜ್ವಲ ಯೋಜನೆಯಡಿ ಬಿಪಿಎಲ್ ಕುಟುಂಬದವರಿಗೆ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗಿದ್ದು ಇದೇ ಮಾದರಿಯಲ್ಲಿ 75 ವರ್ಷದ ಹಿರಿಯರಿಗೆ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗುತ್ತದೆ.
ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ವಿಶೇಷ ಆಚರಣೆಗೆ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವಾಲಯ ಮುಂದಾಗಿದೆ. 1947 ರಲ್ಲಿ ಜನಿಸಿದ ಹಿರಿಯರಿಗೆ ಉಚಿತವಾಗಿ ಅನಿಲ ಸಂಪರ್ಕ ನೀಡಲು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಆಫ್ ಇಂಡಿಯಾ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಬಿಪಿಸಿಎಲ್ ಗೆ ಈ ಕುರಿತಾಗಿ ಪೆಟ್ರೋಲಿಯಂ ಸಚಿವಾಲಯದಿಂದ ಸೂಚನೆ ನೀಡಲಾಗಿದೆ.
1947 ರ ಜನವರಿಯಿಂದ ಡಿಸೆಂಬರ್ ವರೆಗೆ ಜನಿಸಿದವರು ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವ ಯೋಜನೆಯಡಿ ಉಚಿತ ಅಡುಗೆ ಅನಿಲ ಸಂಪರ್ಕ ಪಡೆಯಬಹುದಾಗಿದೆ.
ತಮ್ಮ ಹೆಸರಿನಲ್ಲಿ ಯಾವುದೇ ಗ್ಯಾಸ್ ಸಂಪರ್ಕವನ್ನು ಉಚಿತವಾಗಿ ಹಿರಿಯರು ಪಡೆದುಕೊಳ್ಳಬಹುದು. ಇದಕ್ಕಾಗಿ ತೈಲ ಕಂಪನಿಗಳು 1600 ರೂ. ಭರಿಸಲಿದ್ದು, ಕೇಂದ್ರ ಸರ್ಕಾರ 1000 ರೂ. ನೀಡಲಿದೆ.