alex Certify 75 ಯೂನಿಟ್ ವರೆಗೆ ಉಚಿತ ವಿದ್ಯುತ್, ಮೀರಿದರೆ ಕಟ್ಟಬೇಕು ಸಂಪೂರ್ಣ ಬಿಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

75 ಯೂನಿಟ್ ವರೆಗೆ ಉಚಿತ ವಿದ್ಯುತ್, ಮೀರಿದರೆ ಕಟ್ಟಬೇಕು ಸಂಪೂರ್ಣ ಬಿಲ್

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಬಿಪಿಎಲ್ ಕುಟುಂಬಗಳಿಗೆ ಗೃಹಬಳಕೆಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಪೂರೈಕೆಗೆ ಇಂಧನ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಗೃಹಬಳಕೆಗೆ ವಿದ್ಯುತ್ ಬಳಸುತ್ತಿರುವ ಕುಟುಂಬದವರು ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ. ಏಪ್ರಿಲ್ 30 ಅಂತ್ಯಕ್ಕೆ ಬಾಕಿ ಇರುವ ವಿದ್ಯುತ್ ಅನ್ನು ಸಂಪೂರ್ಣವಾಗಿ ಪಾವತಿಸಿದವರಿಗೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯ ದೊರೆಯುತ್ತದೆ.

ಯೋಜನೆ ವ್ಯಾಪ್ತಿಯ ಎಲ್ಲಾ ಕುಟುಂಬಗಳಿಗೂ ವಿದ್ಯುತ್ ಸಂಪರ್ಕಕ್ಕೆ ಮೀಟರ್ ಅಳವಡಿಸುವುದು ಕಡ್ಡಾಯವಾಗಿದ್ದು, ವಿದ್ಯುತ್ ಬಳಕೆಯ ಪ್ರಮಾಣ ದಾಖಲಿಸುವುದು ಕೂಡ ಕಡ್ಡಾಯವಾಗಿರುತ್ತದೆ. ಫಲಾನುಭವಿಗಳು ತಮ್ಮ ಆಧಾರ್ ಮತ್ತು ಜಾತಿ ಪ್ರಮಾಣ ಪತ್ರ, ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡಬೇಕು. ಪ್ರತಿ ತಿಂಗಳು ಬಿಲ್ ಬಂದ ಸಂದರ್ಭದಲ್ಲಿ ಗ್ರಾಹಕರು ಪೂರ್ಣ ಮೊತ್ತ ಪಾವತಿಸಬೇಕು. ನೇರ ನಗದು ವರ್ಗಾವಣೆ ಯೋಜನೆಯಡಿ ಸಹಾಯಧನ ನೀಡುವ ಮೂಲಕ ಫಲಾನುಭವಿಗಳಿಗೆ ಹಣ ಮರು ಪಾವತಿ ಮಾಡಲಾಗುವುದು.

ಎಸ್ಸಿ,ಎಸ್ಟಿ, ಬಿಪಿಎಲ್ ಕುಟುಂಬಗಳ ವಿದ್ಯುತ್ ಬಳಕೆ 75 ಯೂನಿಟ್ ಮೀರಿದಲ್ಲಿ ಅಂತಹ ಗ್ರಾಹಕರು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ನಿಗದಿಪಡಿಸಿದ ದರದಲ್ಲಿ ಪೂರ್ಣ ಬಿಲ್ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...