ಡಿಜಿಟಲ್ ಪೇಮೆಂಟ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಆನ್ಲೈನ್ ಪೇಮೆಂಟ್ ಹೆಚ್ಚು ಮಾಡಿದ್ದಾರೆ. ಕ್ಯೂ ಆರ್ ಕೋಡ್ ಮೂಲಕ ಪೇಮೆಂಟ್ ಮಾಡ್ತಿದ್ದಾರೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಪೆಟ್ರೋಲ್ ಬಂಕ್ ಅಥವಾ ಅಂಗಡಿಯಲ್ಲಿ ಹಣ ಪಾವತಿ ಮಾಡ್ತಿದ್ದರೆ ಎಚ್ಚರದಿಂದಿರಿ.
ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡ್ತಿದ್ದಂತೆ ನೀವು ಮೋಸದ ಜಾಲಕ್ಕೆ ಬೀಳುವ ಸಾಧ್ಯತೆಯಿದೆ. ಕ್ಯೂ ಆರ್ ಕೋಡನ್ನು ಮೊದಲು ಜಪಾನ್ ನಲ್ಲಿ ಮಾಡಲಾಗಿತ್ತು. ಈಗ ಭಾರತದಲ್ಲಿ ಇದು ಪ್ರಸಿದ್ಧಿ ಪಡೆಯುತ್ತಿದೆ. ಜನರು ಸುಲಭವಾಗಿ ಕ್ಯೂ ಆರ್ ಕೋಡ್ ಮೂಲಕ ಪೇಮೆಂಟ್ ಮಾಡ್ತಿದ್ದಾರೆ. ಆದ್ರೆ ಕ್ಯೂ ಆರ್ ಕೋಡ್ ಫಿಶಿಂಗ್ ಕೂಡ ಹೆಚ್ಚಾಗಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವುದನ್ನು ಹ್ಯಾಕರ್ಸ್ ತಮ್ಮ ಲಾಭಕ್ಕೆ ಬಳಸಿಕೊಳ್ತಾರೆ.
ಹ್ಯಾಕರ್ಸ್ ಮೊದಲು ಕ್ಯೂ ಆರ್ ಕೋಡ್ ಬದಲಿಸುತ್ತಾರೆ. ನೀವು ಸ್ಕ್ಯಾನ್ ಮಾಡ್ತಿದ್ದಂತೆ ಹಣ ಅಂಗಡಿಕಾರರ ಖಾತೆ ಬದಲು ವಂಚಕರ ಖಾತೆಗೆ ಹೋಗುತ್ತದೆ. ಕ್ಯೂ ಆರ್ ಕೋಡ್ ಮೋಸ ಬೇರೆ ಬೇರೆ ರೀತಿಯಲ್ಲಿ ನಡೆಯುತ್ತದೆ. ನಿಮ್ಮ ಖಾತೆಗೆ ಹಣ ಬಂದಿದೆ. ಈ ಲಿಂಕ್ ಕ್ಲಿಕ್ ಮಾಡಿ ಯುಪಿಆರ್ ಪಿನ್ ತೋರಿಸಿ ಹಣ ಪಡೆಯುವಂತ ಹೇಳಲಾಗುತ್ತದೆ.
ನೀವು ಲಿಂಕ್ ನಲ್ಲಿ ನೀಡಿರುವ ಕ್ಯೂ ಆರ್ ಸ್ಕ್ಯಾನ್ ಮಾಡ್ತಿದ್ದಂತೆ ಯುಪಿಐ ಕೇಳಲಾಗುತ್ತದೆ. ನೀವು ಹಣದ ಆಸೆಗೆ ಯುಪಿಐ ಪಿನ್ ನೀಡಿದ್ರೆ ಹಣ ವಂಚಕರ ಖಾತೆ ಸೇರುತ್ತದೆ. ನಿಮ್ಮ ಖಾತೆ ಖಾಲಿಯಾಗುತ್ತದೆ. ಇದರಿಂದ ಸುರಕ್ಷಿತವಾಗಿರಬೇಕೆಂದ್ರೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡ್ತಿದ್ದಂತೆ ಹೆಸರು ಬರುತ್ತದೆ. ಅಂಗಡಿಕಾರರಿಗೆ ಹೆಸರು ಕೇಳಿ ಕನ್ಫರ್ಮ್ ಮಾಡಿಕೊಳ್ಳಿ. ಹೆಸರು ಬೇರೆ ಬಂದಿದ್ದರೆ ಪೇಮೆಂಟ್ ಮಾಡಬೇಡಿ.