ನವದೆಹಲಿ: ಫಾರ್ಚೂನ್ ಅಡುಗೆ ಎಣ್ಣೆ ದರ ಲೀಟರ್ ಗೆ 30 ರೂಪಾಯಿಯಷ್ಟು ಇಳಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಅಡುಗೆ ಎಣ್ಣೆ ದರ ಬಲು ದುಬಾರಿಯಾಗಿದ್ದು, ನಂತರ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ದರ ಇಳಿಕೆ ಆರಂಭವಾಗಿದ್ದು ಅದಾನಿ ವಿಲ್ಮರ್ ಕಂಪನಿ ಫಾರ್ಚೂನ್ ಅಡುಗೆ ಎಣ್ಣೆ ದರವನ್ನು ಲೀಟರ್ ಗೆ 30 ರೂಪಾಯಿಯಷ್ಟು ಇಳಿಕೆ ಮಾಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ಇಳಿಕೆ, ಕೇಂದ್ರ ಸರ್ಕಾರ ಆಮದು ಸುಂಕ ಶೇಕಡ 5ರಷ್ಟು ಕಡಿತಗೊಳಿಸಿದ ಪರಿಣಾಮ ಫಾರ್ಚೂನ್ ವಿವಿಧ ಮಾದರಿಯ ಖಾದ್ಯ ತೈಲದ ಬೆಲೆಯನ್ನು 5 ರೂಪಾಯಿಯಿಂದ 30 ರೂಪಾಯಿವರೆಗೆ ಕಡಿಮೆ ಮಾಡಿದೆ.
ಸೋಯಾ ಎಣ್ಣೆ ದರ 195 ರೂ. ನಿಂದ 165 ರೂ., ಸೂರ್ಯಕಾಂತಿ ಎಣ್ಣೆ ದರ 210 ರೂ. ನಿಂದ 199 ರೂ., ಶೇಂಗಾ ಎಣ್ಣೆ ದರ 220 ರೂ. ನಿಂದ 210 ರೂ.ಗೆ ಇಳಿಕೆಯಾಗಿದೆ. ಫಾರ್ಚೂನ್ ಖಾದ್ಯ ತೈಲದರ 30 ರೂ.ವರೆಗೆ ಇಳಿಕೆ ಆಗಿರುವುದರಿಂದ ಉಳಿದ ಕಂಪನಿಗಳು ಇದೇ ರೀತಿ ದರ ಇಳಿಕೆ ಮಾಡಲಿವೆ ಎನ್ನಲಾಗಿದೆ.