ನವದೆಹಲಿ: ಪ್ರಸ್ತುತ ಜಾಗತಿಕವಾಗಿ ಐಟಿ ಸೇವೆಗಳ ಪ್ರವರ್ಧಮಾನದಿಂದಾಗಿ ಭಾರತೀಯ ಕಂಪನಿಗಳು ಈಗ ತಮ್ಮ ನೇಮಕಾತಿ ಯೋಜನೆಗಳನ್ನು ದ್ವಿಗುಣಗೊಳಿಸುತ್ತಿವೆ.
ಉದಾಹರಣೆಗೆ, ಇನ್ಫೋಸಿಸ್ ಈಗ ಪ್ರಸಕ್ತ ಸಾಲಿನ ಹಣಕಾಸು ವರ್ಷದಲ್ಲಿ 45,000 ಪದವೀಧರರನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ.
ಸೆಪ್ಟೆಂಬರ್ 30, 2021 ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಇನ್ಫೋಸಿಸ್ ತನ್ನ ನೇಮಕಾತಿ ಯೋಜನೆಗಳನ್ನು ಘೋಷಿಸಿದೆ. ಆದಾಗ್ಯೂ, ಟಿಸಿಎಸ್, ವಿಪ್ರೋ ಮತ್ತು ಹೆಚ್ಸಿಎಲ್ನಂತಹ ಇತರ ಐಟಿ ಕಂಪನಿಗಳಂತೆಯೇ ಕಂಪನಿಯು ಈಗ ಹೆಚ್ಚಿನ ಆರ್ಟಿಷನ್ ಎದುರಿಸುತ್ತಿದೆ.
ಬೆಂಗಳೂರು ಮೂಲದ ಐಟಿ ದೈತ್ಯ ಈ ಹಿಂದೆ 35,000 ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಯೋಜಿಸಿತ್ತು. ಆದಾಗ್ಯೂ, ಕಂಪನಿಯು ಈಗ ನಡೆಯುತ್ತಿರುವ ಹಣಕಾಸು ವರ್ಷಕ್ಕೆ ಗುರಿಯನ್ನು 45,000 ಫ್ರೆಶರ್ಗಳಿಗೆ ಹೆಚ್ಚಿಸಿದೆ.
ಮಾರುಕಟ್ಟೆ ಅವಕಾಶದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಲುವಾಗಿ, ಕಂಪನಿಯು ಪದವೀಧರರ ನೇಮಕಾತಿ ಕಾರ್ಯಕ್ರಮವನ್ನು ವರ್ಷಕ್ಕೆ 45,000 ಕ್ಕೆ ವಿಸ್ತರಿಸುತ್ತಿದೆ ಎಂದು ಇನ್ಫೋಸಿಸ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ತಿಳಿಸಿದ್ದಾರೆ.
ಆರೋಗ್ಯ ಮತ್ತು ಕ್ಷೇಮದ ಕ್ರಮಗಳು, ಪುನಶ್ಚೇತನ ಕಾರ್ಯಕ್ರಮಗಳು, ಪರಿಹಾರ ಮತ್ತು ವೃತ್ತಿ ಬೆಳವಣಿಗೆ ಅವಕಾಶಗಳನ್ನು ಒಳಗೊಂಡಂತೆ ನೌಕರರ ಮೌಲ್ಯ ಪ್ರತಿಪಾದನೆ ಬಲಪಡಿಸುವುದನ್ನು ನಾವು ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.