ಖಾದ್ಯ ತೈಲಗಳಲ್ಲಿ ಕಲಬೆರಕೆಯಾಗುತ್ತಿದೆ ಎಂಬುದು ಇಂದು ನಿನ್ನೆಯ ವಿಚಾರವಲ್ಲ. ಅನೇಕ ದಿನಗಳಿಂದಲೂ ಈ ಬಗ್ಗೆ ತಕರಾರು ಇದ್ದೇ ಇದೆ. ಈ ವಿಚಾರವಾಗಿ ಮಹತ್ವದ ನಿರ್ಧಾರವೊಂದನ್ನ ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. ಅದೇ ಖಾದ್ಯ ತೈಲಗಳ ಮುಕ್ತ ಮಾರಾಟವನ್ನು ನಿಷೇಧಕ್ಕೆ ನಿರ್ಧಾರ.
ಹೌದು, ಎಣ್ಣೆಯಲ್ಲಿ ಕಲಬೆರಕೆ ಮಾಡುವ ಕೆಲಸಕ್ಕೆ ಬ್ರೇಕ್ ಹಾಕಲು ಇದೀಗ ಕೇಂದ್ರ ನಿರ್ಧಾರ ಮಾಡಿದೆ. ನೇಸೆಲ್ ಅನ್ನು ಬಿಗಿಗೊಳಿಸಲು ತೀರ್ಮಾನ ಮಾಡಿದ್ದು, ಈ ಬಗ್ಗೆ ಕೇಂದ್ರ ಆಹಾರ ಸಚಿವ ಟ್ವಿಟ್ ಒಂದನ್ನು ಮಾಡಿದ್ದಾರೆ. ಜೊತೆಗೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದಾರೆ.
ಖಾದ್ಯ ತೈಲವನ್ನು ಮುಕ್ತವಾಗಿ ಮಾರಾಟ ಮಾಡುವ ಬಗ್ಗೆ ಸಾಕಷ್ಟು ದೂರುಗಳು ನಿರಂತರವಾಗಿ ಬರುತ್ತಿವೆ. ಇದರಿಂದಾಗಿ ಕಲಬೆರಕೆ ಅಪಾಯವಿದೆ ಎಂಬುದು ಅರಿವಿಗೆ ಬಂದಿದೆ. ಹೀಗಾಗಿ ತೆರೆದ ತೈಲ ಮಾರಾಟವನ್ನು ತಕ್ಷಣ ನಿಷೇಧಿಸಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ರಾಮ್ ವಿಲಾಸ್ ಪಾಸ್ವಾನ್ ಟ್ವಿಟ್ ಮೂಲಕ ತಿಳಿಸಿದ್ದಾರೆ.