alex Certify ಅದಾನಿ ಗ್ರೂಪ್ ಜೊತೆ ಫ್ಲಿಪ್ಕಾರ್ಟ್ ಒಪ್ಪಂದ: ಸೃಷ್ಟಿಯಾಗಲಿದೆ 2,500 ಕ್ಕೂ ಅಧಿಕ ಉದ್ಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದಾನಿ ಗ್ರೂಪ್ ಜೊತೆ ಫ್ಲಿಪ್ಕಾರ್ಟ್ ಒಪ್ಪಂದ: ಸೃಷ್ಟಿಯಾಗಲಿದೆ 2,500 ಕ್ಕೂ ಅಧಿಕ ಉದ್ಯೋಗ

ವಾಲ್ಮಾರ್ಟ್ ಒಡೆತನದ ಇ-ಕಾಮರ್ಸ್ ವಿಭಾಗದ ಕಂಪನಿ ಫ್ಲಿಪ್‌ಕಾರ್ಟ್, ಅದಾನಿ ಗ್ರೂಪ್‌ನೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಫ್ಲಿಪ್ಕಾರ್ಟ್ನ ಲಾಜಿಸ್ಟಿಕ್ಸ್ ಮತ್ತು ಡೇಟಾ ಸೆಂಟರ್ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿ ಹೊಂದಲಾಗಿದೆ. ಎರಡು ಕಂಪನಿಗಳ ಈ ಒಪ್ಪಂದ  ಸುಮಾರು 2,500 ಜನರಿಗೆ ನೇರ ಉದ್ಯೋಗ ಒದಗಿಸುವ ಸಾಧ್ಯತೆಯಿದೆ.

ಈ ದ್ವಿಮುಖ ಪಾಲುದಾರಿಕೆಯಲ್ಲಿ, ಫ್ಲಿಪ್‌ಕಾರ್ಟ್, ಅದಾನಿ ಲಾಜಿಸ್ಟಿಕ್ಸ್ ಲಿಮಿಟೆಡ್‌ನೊಂದಿಗೆ ಸರಬರಾಜು ಸರಪಳಿ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ವೇಗವಾಗಿ ಬೆಳೆಯುತ್ತಿರುವ ಗ್ರಾಹಕರ ಬೇಡಿಕೆಯನ್ನು ಪೂರೈಸುವ ಕೆಲಸ ಮಾಡಲಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ ತನ್ನ ಮೂರನೇ ದತ್ತಾಂಶ ಕೇಂದ್ರವನ್ನು ಚೆನ್ನೈನ ಅಡಾನಿಕೊನೆಕ್ಸ್ ನಲ್ಲಲ್ಲಿ ತೆರೆಯಲಿದೆ.

ಈ ಸಹಭಾಗಿತ್ವದಲ್ಲಿ, ಅದಾನಿ ಲಾಜಿಸ್ಟಿಕ್ಸ್ ಲಿಮಿಟೆಡ್ ಮುಂಬೈನ ಲಾಜಿಸ್ಟಿಕ್ಸ್ ಹಬ್‌ನಲ್ಲಿ 5.34 ಲಕ್ಷ ಚದರ ಅಡಿಯ ಗೋದಾಮು ತೆರೆಯಲಿದೆ. ಪಶ್ಚಿಮ ಭಾರತದಲ್ಲಿ ಹೆಚ್ಚುತ್ತಿರುವ ಇ-ಕಾಮರ್ಸ್ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಾಡಲಾಗ್ತಿದೆ.

ಅತ್ಯಾಧುನಿಕ ತಂತ್ರಜ್ಞಾನಗಳ ಈ ಕೇಂದ್ರವು 2022 ರ ಮೂರನೇ ತ್ರೈಮಾಸಿಕದಲ್ಲಿ ಕಾರ್ಯರೂಪಕ್ಕೆ ಬರಲಿದೆ. ಈ ಒಪ್ಪಂದದಿಂದ 2,500 ನೇರ ಉದ್ಯೋಗ ಮತ್ತು ಸಾವಿರಾರು ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...