ಬಹು ದಿನಗಳಿಂದ ಆನ್ಲೈನ್ ಶಾಪರ್‌ಗಳು ಕಾಯುತ್ತಿದ್ದ ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಶಾಪಿಂಗ್ ಮೇಳ ಆರಂಭಗೊಂಡಿದೆ.
ಸ್ಯಾಮ್ಸಂಗ್ ಗ್ಯಾಲಾಕ್ಸಿ, ಮೋಟರೋಲಾ ಸೇರಿದಂತೆ ಅನೇಕ ದೊಡ್ಡ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳ ಮೇಲೆ ಡಿಸ್ಕೌಂಟ್ ಕೊಡಲಾಗಿದ್ದು, ಇದರ ಮೇಲೆ ಆಕ್ಸಿಸ್ ಬ್ಯಾಂಕ್ ಕಾರ್ಡ್ ಇರುವವರಿಗೆ 5 ಪ್ರತಿಶತ ಹೆಚ್ಚುವರಿ ಡಿಸ್ಕೌಂಟ್ ಲಭ್ಯವಿದೆ.
ಇದೇ ವೇಳೆ, ಆನ್ಲೈನ್ ಶಾಪಿಂಗ್‌ನ ಮತ್ತೊಂದು ದೊಡ್ಡ ಅಡ್ಡಾ ಆಗಿರುವ ಅಮೆಜಾನ್ ಸಹ ತನ್ನ ಪ್ರತಿಸ್ಫರ್ಧಿಗೆ ಪ್ರತಿಯಾಗಿ ಗ್ರೇಟ್ ಇಂಡಿಯನ್ ಸೇಲ್ ಮೇಳ ಇಟ್ಟುಕೊಂಡಿದ್ದು, ಭಾರೀ ರಿಯಾಯಿತಿಗಳನ್ನು ಎಲೆಕ್ಟ್ರಾನಿಕ್ಸ್, ಫ್ಯಾಶನ್, ಗೃಹಬಳಕೆ ಸೇರಿದಂತೆ ಅನೇಕ ವಸ್ತುಗಳ ಮೇಲೆ ಕೊಡಮಾಡುತ್ತಿದೆ.