ಬೆಂಗಳೂರು: ಬಡವರು ಫ್ಲಾಟ್ ಖರೀದಿಸಲು ಮುದ್ರಾಂಕ ಶುಲ್ಕ ವಿನಾಯಿತಿ ನೀಡುವ ಕರ್ನಾಟಕ ಮುದ್ರಾಂಕ ಶುಲ್ಕ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.
20 ಲಕ್ಷ ರೂಪಾಯಿಯಿಂದ 35 ಲಕ್ಷ ರೂಪಾಯಿವರೆಗಿನ ಮೌಲ್ಯದ ಪ್ಲಾಟ್ ಗಳನ್ನು ಖರೀದಿಸಲು ಮುದ್ರಾಂಕ ಶುಲ್ಕವನ್ನು ಶೇಕಡ 5 ರಿಂದ ಶೇಕಡ 3 ರಷ್ಟು ಕಡಿಮೆ ಮಾಡಲಾಗಿದೆ. ಅಪಾರ್ಟ್ಮೆಂಟ್ ಖರೀದಿಸುವ ಮೊದಲ ನೋಂದಣಿಗೆ ಮಾತ್ರ ಇದು ಅನ್ವಯವಾಗುತ್ತದೆ. ಕರ್ನಾಟಕ ಮುದ್ರಾಂಕ ಶುಲ್ಕ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.