ಭಾರತೀಯ ಮಾರುಕಟ್ಟೆಗೆ ಈ ವರ್ಷ ತರಲಾಗಿದ್ದ 100 ಹಾರ್ಲೆ ಡೇವಿಡ್ಸನ್ ಬೈಕ್ಗಳು ಸಂಪೂರ್ಣ ಮುಂಗಡ ಬುಕ್ಕಿಂಗ್ ಕಂಡಿವೆ. ಈ ಮೂಲಕ ದೇಶದಲ್ಲಿ ಹಾರ್ಲೆ ಡೇವಿಡ್ಸನ್ಗೆ ಎಷ್ಟು ಬೇಡಿಕೆ ಹೆಚ್ಚಾಗ್ತಿದೆ ಅನ್ನೋದನ್ನ ಸಾಬೀತುಪಡಿಸ್ತಿದೆ.
ಹೀರೋ ಮೋಟೋ ಕಾರ್ಪ್ ಕಂಪನಿಯು 2021ನೇ ಸಾಲಿನ ಹಾರ್ಲೆ ಡೇವಿಡ್ಸನ್ ಶ್ರೇಣಿಯ ಬೆಲೆಯು 10 ರಿಂದ 35 ಲಕ್ಷ ರೂಪಾಯಿ ಎಂದು ಘೋಷಿಸಿದ ಬಳಿಕ 13 ಬೈಕ್ಗಳ ಬುಕ್ಕಿಂಗ್ ಪ್ರಕ್ರಿಯೆಯು ಏಪ್ರಿಲ್ ತಿಂಗಳಲ್ಲಿ ಆರಂಭವಾಗಿತ್ತು.
ಕಳೆದ ವರ್ಷ ಅಕ್ಟೋಬರ್ನಲ್ಲಿ ಹೀರೋ ಮೋಟೋಕಾರ್ಪ್ ಹಾಗೂ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಸಹಭಾಗಿತ್ವದಲ್ಲಿ ಉದ್ಯಮ ನಡೆಸುತ್ತಿರೋದ್ರ ಬಗ್ಗೆ ಘೋಷಣೆ ಮಾಡಿದ್ದವು.
ಒಪ್ಪಂದದ ಪ್ರಕಾರ, ವಿಶ್ವದ ಅತಿದೊಡ್ಡ ಬೈಕ್ ಹಾಗೂ ಸ್ಕೂಟರ್ ಉತ್ಪಾದಕ ಕಂಪನಿಯಾದ ಹೀರೋ ಮೋಟೋಕಾರ್ಪ್ ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಬೈಕ್ಗಳು ಹಾಗೂ ಅವುಗಳ ಬಿಡಿ ಭಾಗ ಹಾಗೂ ಸರಕುಗಳ ವಿತರಣೆಯ ಹಕ್ಕನ್ನು ತನ್ನದಾಗಿಸಿಕೊಂಡಿದೆ.