ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ಸಹಕಾರ ಸಂಘಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಸರ್ಕಾರ ಸಹಕಾರ ಸಂಘಗಳ ಮೇಲಿನ ಸರ್ ಜಾರ್ಜ್ ಅನ್ನು ಶೇಕಡ 12 ರಿಂದ ಶೇಕಡ 7 ಕ್ಕೆ ಇಳಿಕೆ ಮಾಡುವ ಮೂಲಕ ಸಹಕಾರ ವಲಯಕ್ಕೆ ಗುಡ್ ನ್ಯೂಸ್ ನೀಡಿದೆ.
ಇದರೊಂದಿಗೆ 10 ಕೋಟಿ ರೂ. ಒಳಗಿನ ಆದಾಯದ ಸಹಕಾರ ಸಂಘಗಳ ಮೇಲಿನ ತೆರಿಗೆ ಶೇಕಡ 15 ಕ್ಕೆ ಇಳಿಕೆ ಮಾಡಲಾಗಿದೆ. ಶೇಕಡ 18 ರಿಂದ 15 ಕ್ಕೆ ತೆರಿಗೆ ಇಳಿಕೆ ಮಾಡಲಾಗಿದ್ದು, ಈ ಮೂಲಕ ಸಹಕಾರ ವಲಯಕ್ಕೆ ಕೇಂದ್ರ ಸರ್ಕಾರ ಬಿಗ್ ರಿಲೀಫ್ ಕೊಟ್ಟಿದೆ ಎಂದು ಹೇಳಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಹಕಾರ ಸಂಘಗಳಿಗೆ ಕನಿಷ್ಠ ಪರ್ಯಾಯ ತೆರಿಗೆಯನ್ನು (MAT) 15% ಕ್ಕೆ ಇಳಿಸಿದ್ದಾರೆ. ಈ ಕ್ರಮದಿಂದ ಸಹಕಾರ ಸಂಘಗಳಿಗೆ ಅನುಕೂಲವಾಗಲಿದೆ.
ಪ್ರಸ್ತುತ, ಸಹಕಾರ ಸಂಘಗಳು ಶೇಕಡಾ 18.5 ರ ದರದಲ್ಲಿ MAT ಪಾವತಿಸಬೇಕಾಗುತ್ತದೆ. ಸಹಕಾರಿ ಸಂಘಗಳ ಮೇಲಿನ ಮೇಲ್ತೆರಿಗೆಯನ್ನು ಈಗಿರುವ ಶೇಕಡಾ 12 ರಿಂದ ಶೇಕಡಾ 7 ಕ್ಕೆ ಇಳಿಸಿದ ಅವರು, ಒಟ್ಟು 1 ಕೋಟಿಯಿಂದ 10 ಕೋಟಿವರೆಗಿನ ಆದಾಯ ಹೊಂದಿರುವವರಿಗೆ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ
ಇದು ಹೆಚ್ಚಾಗಿ ಗ್ರಾಮೀಣ ಮತ್ತು ಕೃಷಿ ಸಮುದಾಯಗಳಿಂದ ಬರುವ ಸಹಕಾರ ಸಂಘಗಳು ಮತ್ತು ಅದರ ಸದಸ್ಯರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.