ದಸರಾ ಪ್ರಯುಕ್ತ ಭರ್ಜರಿ ಸೇಲ್ ವೀಕ್ ಆಚರಿಸಿದ ಇ-ಕಾಮರ್ಸ್ ದಿಗ್ಗಜರಾದ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ಗಳು ಇದೀಗ ಅಂಥದ್ದೇ ಇನ್ನಷ್ಟು ವಾರಗಳನ್ನು ಹಮ್ಮಿಕೊಳ್ಳಲು ಮುಂದಾಗಿವೆ.
ಅಕ್ಟೋಬರ್ 24-28ರ ನಡುವೆ ಅಮೆಜಾನ್ ’ಹ್ಯಾಪಿನೆಸ್ ಅಪ್ಗ್ರೇಡ್ ಡೇಸ್’ ಅನ್ನು ಹಮ್ಮಿಕೊಂಡಿದ್ದರೆ ಫ್ಲಿಪ್ಕಾರ್ಟ್ ಇದೇ ಅಕ್ಟೋಬರ್ 29 ರಿಂದ ನವೆಂಬರ್ 4ರವರೆಗೆ ಬಿಗ್ ದೀಪಾವಳಿ ಸೇಲ್ ಇಟ್ಟುಕೊಂಡಿದೆ. ಫ್ಲಿಪ್ಕಾರ್ಟ್ನ ದಸರಾ ಸೇಲ್ ಅಕ್ಟೋಬರ್ 22ರಿಂದ ಅಕ್ಟೋಬರ್ 28ರವರೆಗೆ ಅದಾಗಲೇ ಚಾಲ್ತಿಯಲ್ಲಿದೆ.
ಅಕ್ಟೋಬರ್ 17-23ರ ನಡುವೆ ನಡೆದ ಹಬ್ಬದ ವಿಶೇಷ ಸೇಲ್ಸ್ನಲ್ಲಿ ಇ-ಕಾಮರ್ಸ್ ವಿಂಡೋನಲ್ಲಿ ಒಟ್ಟಾರೆ $3.1 ಶತಕೋಟಿ ವ್ಯಾಪಾರವಾಗಿದೆ.
ಸ್ಮಾರ್ಟ್ಫೋನ್ಗಳ ಮೇಲೆ 40% ರಿಯಾಯಿತಿ, ಗೃಹ ಬಳಕೆ ಹಾಗೂ ಅಡುಗೆಮನೆ ಉತ್ಪನ್ನಗಳ ಮೇಲೆ 65%ವರೆಗೆ ಹಾಗೂ ಫ್ಯಾಶನ್ವೇರ್ಗಳ ಮೇಲೆ 80%ವರೆಗೂ ರಿಯಾಯಿತಿಯನ್ನು ತಾನು ಕೊಡುತ್ತಿರುವುದಾಗಿ ಅಮೆಜಾನ್ ಹೇಳಿಕೊಂಡಿದೆ. ಮತ್ತೊಂದೆಡೆ ಫ್ಲಿಪ್ಕಾರ್ಟ್ ಸಹ ನೋ ಕಾಸ್ಟ್ ಮಾಸಿಕ ಕಂತುಗಳು ಹಾಗೂ ಎಕ್ಸ್ಚೇಂಜ್ ಆಫರ್ಗಳನ್ನು ಕೊಡುತ್ತಿದೆ.
ಅಕ್ಟೋಬರ್ 15 – ನವೆಂಬರ್ 15ರ ನಡುವಿನ ತಿಂಗಳ ಅವಧಿಯಲ್ಲಿ ಆನ್ಲೈನ್ ಶಾಪಿಂಗ್ ವಹಿವಾಟು $6.5 ಶತಕೋಟಿಯಷ್ಟು ಇರಲಿದೆ ಎಂದು ಕನ್ಸಲ್ಟಿಂಗ್ ಸಂಸ್ಥೆ ರೆಡ್ಸೀಯರ್ ಅಂದಾಜು ಮಾಡಿದೆ.