ನವದೆಹಲಿ: ರೈತರಿಗೆ ಆಗುವ ಮೋಸ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ವಂಚನೆ ತಡೆಗೆ ಗೊಬ್ಬರ ಚೀಲದ ಮೇಲೆ ಕಡ್ಡಾಯಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಹಲವು ಔಷಧಗಳ ಮೇಲೆ ಕಂಪನಿಗಳು ಕ್ಯೂಆರ್ ಕೋಡ್ ಮುದ್ರಣ ಮಾಡುವುದನ್ನು ಕಡ್ಡಾಯಗೊಳಿಸಿದ ನಂತರ ರಸಗೊಬ್ಬರ ಚೀಲದ ಮೇಲೆ ಕ್ಯೂಆರ್ ಕೋಡ್ ಮುದ್ರಣ ಮಾಡುವುದನ್ನು ಶೀಘ್ರದಲ್ಲೇ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನಕಲಿ ರಸಗೊಬ್ಬರಗಳಿಂದ ರೈತರು ಮೋಸ ಹೋಗುವುದನ್ನು ತಡೆಯಲು ಮತ್ತು ರಸಗೊಬ್ಬರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ದೇಶದಲ್ಲಿ ರೈತರು ಹೆಚ್ಚಾಗಿ ಬಳಸುವ ಮತ್ತು ಅತಿ ಹೆಚ್ಚು ಮಾರಾಟವಾಗುವ ಎಸ್.ಎಸ್.ಪಿ. ಗೊಬ್ಬರದ ಮೇಲೆ ಮುದ್ರಕರು ಕ್ಯೂಆರ್ ಕೋಡ್ ಮುದ್ರಿಸಲಿದ್ದಾರೆ. ರೈತರು ಅದನ್ನು ಸ್ಕ್ಯಾನ್ ಮಾಡಿದರೆ ಉತ್ಪನ್ನದ ವಿಶಿಷ್ಟ ಗುರುತಿನ ಸಂಖ್ಯೆ, ಬ್ರಾಂಡ್ ಹೆಸರು, ಉತ್ಪಾದಕರ ಹೆಸರು ಮತ್ತು ವಿಳಾಸ, ಬ್ಯಾಚ್ ಸಂಖ್ಯೆ, ಉತ್ಪಾದನೆ ಮಾಡಿದ ದಿನಾಂಕ, ಎಕ್ಸ್ ಪೈರಿ ದಿನಾಂಕ, ಉತ್ಪಾದಕರ ಲೈಸನ್ಸ್ ಸಂಖ್ಯೆ ಮೊದಲಾದ ಮಾಹಿತಿ ದೊರೆಯಲಿದೆ.