ರಸಗೊಬ್ಬರ ಬೆಲೆ 50 ಕೆಜಿಗೆ 700 ರೂಪಾಯಿ ದಿಢೀರ್ ಏರಿಕೆಯಾಗಿದೆ. ಪ್ರತಿ ಚೀಲಕ್ಕೆ 1200 ರೂಪಾಯಿ ಇದ್ದ ಡಿಎಪಿ ದರ 1900 ರೂಪಾಯಿಗೆ ಏರಿಕೆಯಾಗಿದೆ.
ಇತರೆ ಗೊಬ್ಬರಗಳು ಕೂಡ 425 ರೂಪಾಯಿಯಿಂದ 700 ರೂಪಾಯಿವರೆಗೆ ಹೆಚ್ಚಳವಾಗಿವೆ. ರಸಗೊಬ್ಬರ ಬೆಲೆ ಭಾರಿ ದುಬಾರಿಯಾಗಿದೆ. ಕೃಷಿ ಕ್ಷೇತ್ರಕ್ಕೆ ಮತ್ತೊಂದು ಹೊಡೆತ ಬಿದ್ದಿದ್ದು, ಹಿಂದೆಂದೂ ಕೇಳಿರದ ರೀತಿ ಬೆಲೆ ಏರಿಕೆಯಾಗಿದೆ.
ಕಳೆದ ಮಾರ್ಚ್ ನಲ್ಲಿ ದರ ಹೆಚ್ಚಳವಾಗಿದ್ದು, ಮತ್ತೊಮ್ಮೆ ರಸಗೊಬ್ಬರ ದರ ಏರಿಕೆಯಾಗಿದೆ. ರಾಸಾಯನಿಕ ಗೊಬ್ಬರಕ್ಕೆ ಅಗತ್ಯವಾದ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಇವುಗಳನ್ನು ಆಫ್ರಿಕಾ, ಚೀನಾ ದೇಶಗಳಿಂದ ಆಮದು ಮಾಡಿಕೊಳ್ಳಬೇಕಿದೆ. 50 ಕೆಜಿ ಒಂದು ಚೀಲಕ್ಕೆ 700 ರೂ. ಜಾಸ್ತಿಯಾಗಿದೆ. ಮುಂಗಾರು ಆರಂಭದ ವೇಳೆಗೆ ಬಿತ್ತನೆ ಕಾಲಕ್ಕೆ ಗೊಬ್ಬರ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.