ನವದೆಹಲಿ: ರಸಗೊಬ್ಬರ ಕಂಪನಿಗಳು ಡಿಎಪಿ, ಎನ್.ಪಿ.ಕೆ. ದರ ಹೆಚ್ಚಳಕ್ಕೆ ಮುಂದಾಗಿವೆ. IFFCO DAP ಬೆಲೆಯನ್ನು ಶೇ. 12.5 ರಷ್ಟು ಹೆಚ್ಚಿಸಿದೆ. ದಾಸ್ತಾನು ಇರುವ ರಸಗೊಬ್ಬರವನ್ನು ಹಳೆಯ ದರದಲ್ಲಿ ಮಾರಾಟ ಮಾಡುವುದನ್ನು ಮುಂದುವರಿಸಲಾಗುತ್ತದೆ.
ಇನ್ಪುಟ್ ವೆಚ್ಚಗಳು ತೀವ್ರವಾಗಿ ಏರುತ್ತಿರುವ ಹಿನ್ನಲೆಯಲ್ಲಿ ರಸಗೊಬ್ಬರ ಕಂಪನಿಗಳು ರೈತರಿಗೆ ಹೊರೆ ವರ್ಗಾಯಿಸಲು ಪ್ರಾರಂಭಿಸಿವೆ. ಮೂಲಗಳ ಪ್ರಕಾರ ರಸಗೊಬ್ಬರ ಪ್ರಮುಖ IFFCO 50 ಕೆಜಿ ಚೀಲದ ಡಿಎಪಿ ಬೆಲೆಯನ್ನು 1,200 ರೂ.ನಿಂದ ಸುಮಾರು 1,350 ರೂ.ಗೆ(ಶೇ. 12.5 ಹೆಚ್ಚಳ) ಹೆಚ್ಚಿಸಿದೆ. NPKS 50 ಕೆಜಿ ಪ್ರತಿ ಚೀಲಕ್ಕೆ 1,290 ರೂ.ನಿಂದ ಶೇ. 8.5 ಹೆಚ್ಚಳಗೊಂಡು 1,400 ರೂ.ಆಗಿದೆ.