ನವದೆಹಲಿ: ಹಳೆಯ ವಾಹನಗಳನ್ನು ರದ್ದುಗೊಳಿಸಿದ ನಂತರ ಹೊಸ ವಾಹನ ಖರೀದಿಸುವ ವಾಹನ ಮಾಲೀಕರ ವಾಹನ ನೋಂದಣಿ ಶುಲ್ಕ ಮನ್ನಾ ಮಾಡಲು ಮತ್ತು ರಸ್ತೆ ತೆರಿಗೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಸ್ಕ್ರಾಪೆಜ್ ನೀತಿಯ ಕರಡು ಸಿದ್ಧಪಡಿಸಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ನಡೆದ ಸಾರಿಗೆ ಅಭಿವೃದ್ಧಿ ಮಂಡಳಿಯ 40ನೇ ಸಭೆಯಲ್ಲಿ ಚರ್ಚೆ ನಡೆದಿದ್ದು, ಗುಜರಿಗೆ ಕಳುಹಿಸುವ ವಾಹನಗಳನ್ನು ಪರಿಸರಸ್ನೇಹಿ ರೀತಿಯಲ್ಲಿ ಕಳಚಬೇಕು. ಹಳೆಯ ಮಾಲಿನ್ಯಕಾರಕ ವಾಹನಗಳನ್ನು ಗುಜರಿಗೆ ಹಾಕುವ ವಾಹನ ಮಾಲೀಕರಿಗೆ ನೋಂದಣಿ ಶುಲ್ಕ ಮನ್ನಾ, ರಸ್ತೆ ತೆರಿಗೆ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.