alex Certify ವಿಶ್ವದ ಪ್ರಮುಖ ಹೂಡಿಕೆ ತಾಣವಾಗಿ ಹೊರಹೊಮ್ಮಿದ ಭಾರತ: ದಾಖಲೆಯ 83.57 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಪ್ರಮುಖ ಹೂಡಿಕೆ ತಾಣವಾಗಿ ಹೊರಹೊಮ್ಮಿದ ಭಾರತ: ದಾಖಲೆಯ 83.57 ಬಿಲಿಯನ್ ಡಾಲರ್ ವಿದೇಶಿ ಹೂಡಿಕೆ

ನವದೆಹಲಿ: ಭಾರತ 2021-22 ರಲ್ಲಿ 83.57 ಶತಕೋಟಿ ಡಾಲರ್‌ ಗಳಷ್ಟು ವಾರ್ಷಿಕ ಎಫ್‌.ಡಿ.ಐ.(ವಿದೇಶಿ ನೇರ ಹೂಡಿಕೆ) ಮೂಲಕ ಅತಿ ಹೆಚ್ಚು ಹೂಡಿಕೆ ದಾಖಲಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶುಕ್ರವಾರ ತಿಳಿಸಿದೆ.

2020-21 ರಲ್ಲಿ 81.97 ಶತಕೋಟಿ ಡಾಲರ್ ನಷ್ಟು ಹೂಡಿಕೆಯಾಗಿತ್ತು. ಭಾರತ ಉತ್ಪಾದನಾ ವಲಯದಲ್ಲಿ ವಿದೇಶಿ ಹೂಡಿಕೆಗೆ ಆದ್ಯತೆಯ ದೇಶವಾಗಿ ವೇಗವಾಗಿ ಹೊರಹೊಮ್ಮುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತವು 2021-22 ರ ಹಣಕಾಸು ವರ್ಷದಲ್ಲಿ 83.57 ಶತಕೋಟಿ ಡಾಲರ್ ವಾರ್ಷಿಕ ಎಫ್‌.ಡಿ.ಐ. ಒಳಹರಿವು ದಾಖಲಿಸಿದೆ. 2020-21 (12.09 ಶತಕೋಟಿ ಡಾಲರ್) ಗೆ ಹೋಲಿಸಿದರೆ 2021-22(21.34 ಶತಕೋಟಿ) ನಲ್ಲಿ ಉತ್ಪಾದನಾ ವಲಯಗಳಲ್ಲಿ FDI ಇಕ್ವಿಟಿ ಒಳಹರಿವು ಶೇಕಡ 76 ರಷ್ಟು ಹೆಚ್ಚಾಗಿದೆ.

ಅಗ್ರ ಹೂಡಿಕೆದಾರರ ದೇಶಗಳ ವಿಷಯದಲ್ಲಿ ಸಿಂಗಾಪುರ 27 ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲಿದೆ. ಕಳೆದ ಆರ್ಥಿಕ ವರ್ಷದಲ್ಲಿ US(ಶೇಕಡ 18) ಮತ್ತು ಮಾರಿಷಸ್ (ಶೇಕಡ 16) ನಂತರದ ಸ್ಥಾನದಲ್ಲಿದೆ. ಕಂಪ್ಯೂಟರ್ ಸಾಫ್ಟ್‌ ವೇರ್ ಮತ್ತು ಹಾರ್ಡ್‌ ವೇರ್ ಕ್ಷೇತ್ರಗಳು ಗರಿಷ್ಠ ಒಳಹರಿವುಗಳನ್ನು ಆಕರ್ಷಿಸಿದೆ. ಸೇವಾ ವಲಯ ಮತ್ತು ಆಟೋಮೊಬೈಲ್ ಉದ್ಯಮವೂ ಹೆಚ್ಚಿನ ಹೂಡಿಕೆ ಆಕರ್ಷಿಸಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...