ಬ್ಯಾಂಕ್ ಗಳು ಸ್ಥಿರ ಠೇವಣಿಯ ಬಡ್ಡಿ ದರವನ್ನು ಬದಲಾಯಿಸಲು ಪ್ರಾರಂಭಿಸಿವೆ. ಕೆಲ ದಿನಗಳ ಹಿಂದೆ ಎಸ್ಬಿಐ ಮತ್ತು ಆಕ್ಸಿಸ್ ಬ್ಯಾಂಕ್ ಎಫ್ ಡಿ ದರದಲ್ಲಿ ಬದಲಾವಣೆ ಮಾಡಿತ್ತು. ಬ್ಯಾಂಕ್ ಗಳಲ್ಲಿ ಸ್ಥಿರ ಠೇವಣಿ ಇಡುವುದನ್ನು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಬ್ಯಾಂಕ್ ಗಳು ವಿಭಿನ್ನ ಅವಧಿ ಸ್ಥಿರ ಠೇವಣಿಗೆ ಬೇರೆ ಬೇರೆ ಬಡ್ಡಿ ದರವನ್ನು ನಿಗಧಿ ಮಾಡುತ್ತದೆ. ಸರ್ಕಾರಿ ಬ್ಯಾಂಕ್ ಗಳು ಹಾಗೂ ಖಾಸಗಿ ಬ್ಯಾಂಕ್ ಗಳು 7 ದಿನಗಳಿಂದ 10 ವರ್ಷಗಳವರೆಗೆ ಸ್ಥಿರ ಠೇವಣಿ ಸೌಲಭ್ಯವನ್ನು ನೀಡುತ್ತವೆ.
ಎಸ್ಬಿಐ ಒಂದು ವರ್ಷದಿಂದ ಎರಡು ವರ್ಷದ ಎಫ್ಡಿ ಬಡ್ಡಿ ದರವನ್ನು ಹೆಚ್ಚಿಸಿದೆ. 7 ದಿನಗಳಿಂದ 45 ದಿನಗಳವರೆಗಿನ ಠೇವಣಿಗೆ ಶೇಕಡಾ 2.90ರಷ್ಟು ಬಡ್ಡಿ ಸಿಗುತ್ತದೆ. 46 ದಿನಗಳಿಂದ 179 ದಿನಗಳ ಠೇವಣಿಗೆ ಶೇಕಡಾ 3.90ರಷ್ಟು ಬಡ್ಡಿ ಸಿಗುತ್ತದೆ.180 ರಿಂದ 210 ದಿನಗಳ ಸ್ಥಿರ ಠೇವಣಿಗೆ ಶೇಕಡಾ 4.40 ರಷ್ಟು, 211 ದಿನಗಳಿಂದ 1 ವರ್ಷದ ಸ್ಥಿರ ಠೇವಣಿಗೆ ಶೇಕಡಾ 4.40ರಷ್ಟು ಬಡ್ಡಿ ಸಿಗುತ್ತದೆ. ಒಂದು ವರ್ಷದಿಂದ 2 ವರ್ಷದ ಸ್ಥಿರ ಠೇವಣಿಗೆ ಶೇಕಡಾ 5ರಷ್ಟು ಹಾಗೂ 2ರಿಂದ ಮೂರು ವರ್ಷದ ಸ್ಥಿರ ಠೇವಣಿಗೆ ಶೇಕಡಾ 5.10ರಷ್ಟು ಬಡ್ಡಿ ಸಿಗುತ್ತದೆ.
ಆಕ್ಸಸ್ ಬ್ಯಾಂಕ್ ನಲ್ಲಿ 7 ದಿನಗಳಿಂದ 29 ದಿನಗಳ ಸ್ಥಿರ ಠೇವಣಿಗೆ ಶೇಕಡಾ 2.50ರಷ್ಟು ಬಡ್ಡಿ ಸಿಗುತ್ತದೆ. 30 ದಿನಗಳಿಂದ 90 ದಿನಗಳ ಸ್ಥಿರ ಠೇವಣಿಗೆ ಶೇಕಡಾ 3, 90ರಿಂದ 120 ದಿನಗಳ ಸ್ಥಿರ ಠೇವಣಿಗೆ ಶೇಕಡಾ 3.50ರಷ್ಟು ಹಾಗೂ 120ರಿಂದ 180 ದಿನಗಳ ಸ್ಥಿರ ಠೇವಣಿಗೆ ಶೇಕಡಾ 3.75ರಷ್ಟು ಬಡ್ಡಿ ಸಿಗುತ್ತದೆ. 180 ರಿಂದ 360 ದಿನಗಳ ಸ್ಥಿರ ಠೇವಣಿಗ ಶೇಕಡಾ 4.40ರಷ್ಟು ಹಾಗೂ ಎರಡು ವರ್ಷದಿಂದ ಮೂರು ವರ್ಷದ ಸ್ಥಿರ ಠೇವಣಿಗೆ ಶೇಕಡಾ 5.40ರಷ್ಟು ಬಡ್ಡಿ ಸಿಗುತ್ತದೆ.