ಬೆಂಗಳೂರು: ಟೋಲ್ ಪ್ಲಾಜಾಗಳಲ್ಲಿ ನಗದು ಶುಲ್ಕ ಪಾವತಿಸುವ ವ್ಯವಸ್ಥೆಯನ್ನು ಜನವರಿ 1 ರಿಂದ ರದ್ದು ಮಾಡಲಿದ್ದು, ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದೆ.
2020 ರ ಜನವರಿ 15 ರಿಂದ ವಾಹನಗಳಿಗೆ ಫಾಸ್ಟ್ಯಾಗ್ ಮೂಲಕ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಫಾಸ್ಟ್ಯಾಗ್ ಇಲ್ಲದ ವಾಹನಗಳಿಗೆ ಟೋಲ್ ಪ್ಲಾಜಾಗಳಲ್ಲಿ ಪ್ರತ್ಯೇಕ ಪಥ ನಿಗದಿಪಡಿಸಲಾಗಿದೆ. ಫಾಸ್ಟಾಗ್ ಇಲ್ಲದ ವಾಹನಗಳು ಫಾಸ್ಟ್ಯಾಗ್ ಪಥದಲ್ಲಿ ಸಂಚರಿಸಿದರೆ ಎರಡು ಪಟ್ಟು ಶುಲ್ಕ ಪಾವತಿಸಬೇಕಿದೆ.
2021 ರ ಜನವರಿ 1 ರಿಂದ ಈ ವ್ಯವಸ್ಥೆಯಲ್ಲಿ ಬದಲಾವಣೆಯಾಗುತ್ತಿದೆ. ನಗದು ಪಾವತಿ ಸಂಚರಿಸುವ ವ್ಯವಸ್ಥೆಯನ್ನು ರದ್ದು ಮಾಡಲಾಗುವುದು. ಇನ್ನು ಮುಂದೆ ಫಾಸ್ಟ್ಯಾಗ್ ಇದ್ದ ವಾಹನಗಳು ಮಾತ್ರ ನಿಗದಿತ ಪಥದ ಮೂಲಕ ಸಂಚರಿಸಬಹುದು. ಇಲ್ಲದಿದ್ದರೆ ಎರಡು ಪಟ್ಟು ಶುಲ್ಕ ಪಾವತಿಸಿ ಮೂಲಕ ಟೋಲ್ ಪ್ಲಾಜಾ ಹಾದು ಹೋಗಬೇಕು. ವಾಹನದಟ್ಟಣೆ ಕಡಿಮೆ ಮಾಡುವುದು, ಇಂಧನ ಉಳಿತಾಯ ಮೊದಲಾದ ಕಾರಣಗಳಿಂದ ಫಾಸ್ಟ್ಯಾಗ್ ಮೂಲಕ ಟೋಲ್ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ.