ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸ್ ಇಲಾಖೆ ಪಾಸ್ಟ್ಯಾಗ್ ನಲ್ಲೇ ದಂಡ ವಸೂಲಿಗೆ ಯೋಜನೆ ರೂಪಿಸುತ್ತಿದೆ.
ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮತ್ತಷ್ಟು ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ನಿಗದಿಪಡಿಸಿದ ವೇಗಮಿತಿ ಮೀರಿದಲ್ಲಿ ಸ್ಥಳದಲ್ಲೇ ವಾಹನಗಳ ಫಾಸ್ಟ್ ಟ್ಯಾಗ್ ನಿಂದ ದಂಡದ ಹಣ ಸರ್ಕಾರದ ಖಜಾನೆಗೆ ಪಾವತಿಯಾಗುವ ರೀತಿಯಲ್ಲಿ ವ್ಯವಸ್ಥೆ ರೂಪಿಸಲಾಗುತ್ತಿದೆ.
ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ವಾಹನಗಳ ವೇಗದ ಮಿತಿ 100 ಕಿಲೋಮೀಟರ್ ನಿಗದಿಪಡಿಸಲಾಗಿದೆ. ವಾಹನ ಸಂಚರಿಸುವಾಗ ಅದರ ವೇಗ ಎಷ್ಟಿದೆ ಎನ್ನುವ ಮಾಹಿತಿ ಡಿಸ್ಪ್ಲೇ ಆಗುತ್ತಿದ್ದು, ನಿಯಮ ಉಲ್ಲಂಘಿಸಿದ ವಾಹನದ ಫೋಟೋ ಟೋಲ್ ಪ್ಲಾಜಾ ಮೂಲಕ ಪೊಲೀಸರಿಗೆ ಲಭ್ಯವಾಗುತ್ತದೆ. ನಂತರ ದಂಡ ವಸೂಲಿ ಪ್ರಕ್ರಿಯೆ ನಡೆಸುವ ಉದ್ದೇಶವನ್ನು ಪೊಲೀಸರು ಹೊಂದಿದ್ದು, ಇದು ಯಶಸ್ವಿಯದಲ್ಲಿ ಬೇರೆ ಹೆದ್ದಾರಿಗಳಲ್ಲಿಯೂ ಇದನ್ನು ಜಾರಿ ಮಾಡುವ ಸಾಧ್ಯತೆ ಇದೆ. ಈ ಮೂಲಕ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಹೊಸ ಅಸ್ತ್ರ ಪ್ರಯೋಗಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ ಎಂದು ಹೇಳಲಾಗಿದೆ.