ನವದೆಹಲಿ: ಫೆಬ್ರವರಿ 15 ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ಯಾಗ್ ಅನಿವಾರ್ಯವಾಗಲಿದೆ. ಇಲ್ಲದಿದ್ದರೆ ಎರಡು ಪಟ್ಟು ಶುಲ್ಕ ವಿಧಿಸಲಾಗುವುದು ಎಂದು ಹೇಳಲಾಗಿದೆ.
ಈ ಹಿಂದೆ ಜನವರಿ 1 ರಿಂದಲೇ ಫಾಸ್ಟ್ಯಾಗ್ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿತ್ತು. ನಂತರದಲ್ಲಿ ವಿನಾಯಿತಿ ನೀಡಿ ಫೆಬ್ರವರಿ 15 ರವರೆಗೂ ವಿಸ್ತರಿಸಲಾಗಿದ್ದು ಸೋಮವಾರದಿಂದ ಎಲ್ಲ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಿರುತ್ತದೆ.
ದೇಶಾದ್ಯಂತ ಟೋಲ್ಗಳಲ್ಲಿ ಫಾಸ್ಟ್ಯಾಗ್ ಮೂಲಕ ತೆರಿಗೆ ಪಾವತಿಸಬೇಕು. ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳು ಎರಡು ಪಟ್ಟು ತೆರಿಗೆ ಪಾವತಿಸಬೇಕು. ಫೆಬ್ರವರಿ 15 ರಿಂದಲೇ ನಿಯಮ ಜಾರಿಯಾಗಲಿದ್ದು ಸದ್ಯಕ್ಕೆ ಯಾವುದೇ ವಿನಾಯಿತಿ ನೀಡದಿರಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2019 ರಲ್ಲಿ ಫಾಸ್ಟ್ಯಾಗ್ ಆರಂಭಿಸಿದ್ದು ಟೋಲ್ ಶುಲ್ಕ ಪಾವತಿಗಳನ್ನು ಇದರ ಮೂಲಕವೇ ಪಾವತಿಸಬೇಕಿದೆ.