ನವದೆಹಲಿ: ಟೋಲ್ ಶುಲ್ಕದ ಮೇಲೆ ರಿಯಾಯಿತಿ ಪಡೆಯಲು ಫಾಸ್ಟ್ ಟ್ಯಾಗ್ ಕಡ್ಡಾಯವೆಂದು ಸಾರಿಗೆ ಸಚಿವಾಲಯ ಹೇಳಿದೆ.
24 ಗಂಟೆಗಳ ಒಳಗೆ ಮರಳುವ ಪ್ರಯಾಣ ಮಾಡುವ ಬಳಕೆದಾರರಿಗೆ ರಿಯಾಯಿತಿ ಸೇರಿದಂತೆ ಎಲ್ಲ ರೀತಿಯ ಟೋಲ್ ಶುಲ್ಕಕ್ಕೆ ವಿನಾಯಿತಿ ಪಡೆಯಲು ವಾಹನ ಮಾಲೀಕರಿಗೆ ಫಾಸ್ಟ್ ಟ್ಯಾಗ್ ಹೊಂದಿರುವುದು ಕಡ್ಡಾಯ ಎಂದು ಹೇಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳನ್ನು ತಿದ್ದುಪಡಿಮಾಡುವ ಅಧಿಸೂಚನೆಯನ್ನು ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿದ್ದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಪ್ಲಾಜಾಗಳಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲಾಗುತ್ತಿದೆ. 24 ಗಂಟೆಗಳ ಒಳಗೆ ಹಿಂತಿರುಗುವ ಪ್ರಯಾಣ ಮಾಡುವ ಬಳಕೆದಾರರಿಗೆ ರಿಯಾಯಿತಿ ಮತ್ತು ಇತರೆ ಸ್ಥಳೀಯ ವಿನಾಯಿತಿಗಳನ್ನು ಪಾಸ್ಟ್ಯಾಗ್ ಹೊಂದಿದ್ದರೆ ಮಾತ್ರ ಒದಗಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.