
ಇದನ್ನ ಹೊರತುಪಡಿಸಿ ಲಿಸ್ಟ್ ಮಾಡಲಾದ ಬ್ಯಾಂಕ್ ಹಾಗೂ ಏಜೆಂಟ್ಗಳ ಬಳಿಯೂ ಫಾಸ್ಟ್ಟ್ಯಾಗ್ ಅಧಿಕೃತ ಸೇಲ್ಸ್ ಪಾಯಿಂಟ್ ಖರೀದಿ ಮಾಡಬಹುದಾಗಿದೆ. ಫಾಸ್ಟ್ಟ್ಯಾಗ್ ಸಂಬಂಧಿ ಸಂಪೂರ್ಣ ದಾಖಲೆಯನ್ನ IHMCL ವೆಬ್ಸೈಟ್ನಲ್ಲಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 1033ಕ್ಕೆ ಕರೆ ಮಾಡಿ ನಕಲಿ ಫ್ಯಾಸ್ಟ್ಟ್ಯಾಗ್ಗಳ ಬಗ್ಗೆ ದೂರು ಸಲ್ಲಿಸಬಹುದಾಗಿದೆ.
ಕೇಂದ್ರ ಸರ್ಕಾರ ಫೆಭ್ರವರಿ 15ರಿಂದ ದೇಶಾದ್ಯಂತ ಫಾಸ್ಟ್ಟ್ಯಾಗ್ ಕಡ್ಡಾಯಗೊಳಿಸಿದೆ. ಒಂದು ವೇಳೆ ನಿಮ್ಮ ವಾಹನಕ್ಕೆ ಫಾಸ್ಟ್ಟ್ಯಾಗ್ ಇಲ್ಲ ಎಂದಾದಲ್ಲಿ ಟೋಲ್ಗಳಲ್ಲಿ ನೀವು ದುಪ್ಪಟ್ಟು ಹಣ ನೀಡಬೇಕಾಗುತ್ತೆ . ಡಿಜಿಟಲ್ ಮಾಧ್ಯಮದ ಮೂಲಕ ಶುಲ್ಕ ಕಟ್ಟುವವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಫಾಸ್ಟ್ಟ್ಯಾಗ್ನಿಂದಾಗಿ ಟೋಲ್ಗಳಲ್ಲಿ ವಾಹನ ದಟ್ಟಣೆ ತಪ್ಪಿಸಬಹುದಾಗಿದೆ.