ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಸಿಹಿಸುದ್ದಿ ನೀಡಲಾಗಿದೆ. ಎಲ್ಲಾ 4 ಚಕ್ರದ ವಾಹನಗಳಿಗೆ ಮತ್ತು ವಾಣಿಜ್ಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲು ವಿಧಿಸಿದ್ದ ಅಂತಿಮ ಗಡುವನ್ನು ವಿಸ್ತರಿಸಲಾಗಿದೆ.
2020 ರ ಡಿಸೆಂಬರ್ 31 ಕ್ಕೆ ನಿಗದಿಪಡಿಸಿದ್ದ ಫ್ಯಾಸ್ಟ್ಯಾಗ್ ಕಡ್ಡಾಯ ಗಡುವನ್ನು ಒಂದೂವರೆ ತಿಂಗಳು ವಿಸ್ತರಿಸಲಾಗಿದೆ. ದೇಶದ ಎಲ್ಲ 4 ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ ಜನವರಿ 1 ರಿಂದ ಜಾರಿಗೆ ಬರುವಂತೆ ನಿಯಮ ರೂಪಿಸಿದ್ದು, ಆದರೆ, ಫೆಬ್ರವರಿ 15 ರವರೆಗೆ ಗಡುವು ಮುಂದೂಡಲಾಗಿದೆ.
ಟೋಲ್ ಪ್ಲಾಜಾಗಳಲ್ಲಿ ಹೆದ್ದಾರಿ ಟೋಲ್ ಶುಲ್ಕ ಸಂಗ್ರಹವನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಫಾಸ್ಟ್ಯಾಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ನಗದು ರಹಿತ ವಹಿವಾಟು, ಸಮಯ, ಇಂಧನ ಉಳಿತಾಯ ಮೊದಲಾದ ಉದ್ದೇಶದಿಂದ ಎಲ್ಲಾ 4 ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ.