ಮನೆಯಲ್ಲೇ ಇದ್ದ ಕಾರಿಗೂ ಫಾಸ್ಟ್ಯಾಗ್ ನಲ್ಲಿ ಹಣ ಕಡಿತವಾಗಿದೆ. ಕಾರ್ ಓಡಿಸದಿದ್ದರೂ ಫಾಸ್ಟ್ಯಾಗ್ ನಲ್ಲಿ ಹಣ ಕಡಿತವಾಗಿರುವ ಕುರಿತು ದಾವಣಗೆರೆಯಲ್ಲಿ ವಕೀಲರೊಬ್ಬರು ದೂರು ನೀಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರು, ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ತಮ್ಮ ಮನೆಯಲ್ಲೇ ಕಾರು ನಿಂತಿದ್ದರೂ ಕೂಡ ಫಾಸ್ಟ್ಯಾಗ್ ನಿಂದ ಹಣ ಕಡಿತವಾಗಿರುವ ಬಗ್ಗೆ ವಕೀಲ ಎಸ್. ಪರಮೇಶ್ ಅವರು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಮಾರ್ಚ್ 31 ರಂದು ರಾತ್ರಿ ಇನ್ನೋವಾ ಕಾರ್ ಮನೆಯ ಕಾಂಪೌಂಡ್ ಒಳಗೆ ನಿಂತಿದೆ. ಆದರೆ, ಅವರ ಫಾಸ್ಟ್ಯಾಗ್ ನಿಂದ ಹೆಬ್ಬಾಳ ಟೋಲ್ ನಲ್ಲಿ 60 ರೂ., ಕುಲುಮನಹಳ್ಳಿ ಟೋಲ್ 15 ರೂ., ನವಯುಗ ಟೋಲ್ ನಲ್ಲಿ 20 ರೂ., ಗಾಯಿಲಾಳು ಟೋಲ್ ನಲ್ಲಿ 70 ರೂ., ಕರ್ಜೀವನ ಟೋಲ್ ಪ್ಲಾಜಾದಲ್ಲಿ 80 ರೂ. ಕಡಿತವಾಗಿದೆ.
ಮಾರ್ಚ್ 19 ಮತ್ತು ಮಾರ್ಚ್ 23 ರಂದು ಒಟ್ಟು 7 ಸಲ ಅವರ ಫಾಸ್ಟ್ಯಾಗ್ ನಿಂದ ಹಣ ಕಡಿತವಾಗಿದ್ದು, ಅವರು ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಕಾರ್ ಮನೆಯಲ್ಲೇ ಇದ್ದರೂ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ನಿಂದ ಹಣ ಕಡಿತವಾಗಿದೆ. ಬೇಕಾದರೆ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಬಹುದು. ವಿನಾಕಾರಣ ಹಣ ಕಡಿತವಾದ ಬಗ್ಗೆ ಕೋರ್ಟ್ ನಲ್ಲಿ ಖಾಸಗಿ ದೂರು ಸಲ್ಲಿಸುವುದಾಗಿ ಅವರು ತಿಳಿಸಿದ್ದು, ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.