ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ FASTag ಕುರಿತಂತೆ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಂಡಿದೆ. ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದಿದ್ದರೂ ಸಹ ಟೋಲ್ ನಲ್ಲಿ ವಾಹನ ಹಾದು ಹೋಗುವಷ್ಟು ಬ್ಯಾಲೆನ್ಸ್ ಇದ್ದರೆ ಸಾಕು ಎಂದು ತಿಳಿಸಲಾಗಿದೆ. ಇದುವರೆಗೆ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಕನಿಷ್ಠ 150 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಇರಬೇಕಾಗಿದ್ದು, ಈ ನಿಯಮವನ್ನು ಈಗ ಹಿಂಪಡೆಯಲಾಗಿದೆ.
ಕೆಲ ಟೋಲ್ ಗಳಲ್ಲಿ 20 ರೂಪಾಯಿ ಶುಲ್ಕ ಇದ್ದರೂ ಸಹ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಕನಿಷ್ಠ ಮೊತ್ತ 150 ರೂಪಾಯಿ ಇರದಿದ್ದರೆ ಆಗ ನಗದು ನೀಡಬೇಕಾಗಿತ್ತು. ಆ ಸಂದರ್ಭದಲ್ಲಿವಾಹನ ಚಾಲಕರ ಫಾಸ್ಟ್ಯಾಗ್ ಖಾತೆಯಲ್ಲಿ 50 ರೂಪಾಯಿ ಇದ್ದರೂ ಸಹ 20ರೂ ಟೋಲ್ ಶುಲ್ಕ ಕಡಿತಗೊಳ್ಳುತ್ತಿರಲಿಲ್ಲ. ಇದು ವಾಹನ ಚಾಲಕರು ಹಾಗೂ ಟೋಲ್ ಸಿಬ್ಬಂದಿ ನಡುವೆ ಘರ್ಷಣೆಗೆ ಕಾರಣವಾಗುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈಗಿನ ತೀರ್ಮಾನದಿಂದಾಗಿ ಇದಕ್ಕೆ ತೆರೆಬೀಳಲಿದೆ.
ಹಳೆ ವಾಹನ ಮಾಲೀಕರಿಗೆ ಬಿಗ್ ಶಾಕ್: ರಾಜ್ಯದಲ್ಲಿ ಗುಜರಿ ಸೇರಲಿವೆ 40 ಲಕ್ಷ ಬೈಕ್, 11 ಲಕ್ಷ ಕಾರ್ ಸೇರಿ ಬರೋಬ್ಬರಿ 63 ಲಕ್ಷ ವಾಹನ
ಫೆಬ್ರವರಿ 15ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದ್ದು, ಇದರ ಮಧ್ಯೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಒಂದೊಮ್ಮೆ ವಾಹನಗಳ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ನಾನ್ ನೆಗೆಟಿವ್ ಬ್ಯಾಲೆನ್ಸ್ ಇದ್ದರೂ ಸಹ ಟೋಲ್ ಪ್ಲಾಜಾ ಮೂಲಕ ತೆರಳಲು ಅವಕಾಶ ಸಿಗಲಿದೆ. ಟೋಲ್ ದಾಟಿದ ಬಳಿಕ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಆದರೆ ಬ್ಯಾಂಕುಗಳು ಭದ್ರತಾ ಠೇವಣಿಯಿಂದ ಆ ಮೊತ್ತವನ್ನು ಮುರಿದುಕೊಳ್ಳಬಹುದಾಗಿದೆ. ಸದ್ಯಕ್ಕೆ ಈ ಎಲ್ಲ ನಿಯಮವನ್ನು ಕಾರು, ಜೀಪು ಹಾಗೂ ವ್ಯಾನ್ ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದ್ದು, ವಾಣಿಜ್ಯ ಉದ್ದೇಶದ ಬೃಹತ್ ವಾಹನಗಳು ತಮ್ಮ ಫಾಸ್ಟ್ ಟ್ಯಾಗ್ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳಬೇಕಿದೆ.