ಕೇಂದ್ರ ಸರ್ಕಾರ ಇಂದಿನಿಂದ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದ್ದು, ಒಂದೊಮ್ಮೆ ಫಾಸ್ಟ್ ಟ್ಯಾಗ್ ಹೊಂದಿರದ ವಾಹನಗಳು ಟೋಲ್ ಮೂಲಕ ಹಾದು ಹೋಗಬೇಕೆಂದರೆ ದುಪ್ಪಟ್ಟು ಶುಲ್ಕ ನೀಡಬೇಕಾಗುತ್ತದೆ. ಮಧ್ಯರಾತ್ರಿಯಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಹೀಗಾಗಿ ಬಹಳಷ್ಟು ಟೋಲ್ ಗಳ ಮುಂದೆ ವಾಹನ ಚಾಲಕರು ಆಕ್ರೋಶ ಹೊರ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಕೇಂದ್ರ ಸರ್ಕಾರ ಗಡುವನ್ನು ಹಲವು ಬಾರಿ ವಿಸ್ತರಿಸಿ ಬಳಿಕ ಇದೀಗ ಕಡ್ಡಾಯಗೊಳಿಸಿದ್ದು, ಈ ಗಡುವಿನ ಬಳಿಕವೂ ಕೆಲ ವಾಹನ ಚಾಲಕರಿಗೆ ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದ್ದರ ಮಾಹಿತಿಯೇ ಇರಲಿಲ್ಲ. ಹೀಗಾಗಿ ಟೋಲ್ ಸಿಬ್ಬಂದಿ ದುಪ್ಪಟ್ಟು ಶುಲ್ಕ ಕೇಳಿದ ವೇಳೆ ಅವರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.
ಮಡಿಕೆ ಹಿಡಿದು ಸರ್ಕಾರದ ಗಮನ ಸೆಳೆದ ಮಹಿಳಾ ಇಂಜಿನಿಯರ್
ಫಾಸ್ಟ್ ಟ್ಯಾಗ್ ಕಡ್ಡಾಯದ ಜೊತೆಗೆ ಕಳೆದ ಎಂಟು ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿರುವುದೂ ಸಹ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರದ ನಿಯಮಗಳು ಕೊರೊನಾ ಲಾಕ್ಡೌನ್ ನಿಂದ ಈಗಾಗಲೇ ತತ್ತರಿಸಿರುವ ಶ್ರೀಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದೆ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.