ವಾಹನಗಳ ನಂಬರ್ ಪ್ಲೇಟ್ ಗಳ ಮೇಲೆ ಫ್ಯಾನ್ಸಿ ಸಂಖ್ಯೆಗಳನ್ನು ಹಾಕಿಸಲು ಜನರಿಗೆ ಬಲೇ ಕ್ರೇಜ್. ಜುಲೈಗೆ ಹೋಲಿಗೆ ಮಾಡಿದಲ್ಲಿ ಆಗಸ್ಟ್‌ನಲ್ಲಿ ಮಾರಾಟವಾದ ಕಾರುಗಳ ಸಂಖ್ಯೆಯಲ್ಲಿ 37.8 ಪ್ರತಿಶತದಷ್ಟು ಇಳಿಕೆ ಕಂಡುಬಂದಿದ್ದರೂ ಸಹ ದೆಹಲಿಯಲ್ಲಿ ಫ್ಯಾನ್ಸಿ ನೋಂದಣಿ ಸಂಖ್ಯೆಯೊಂದನ್ನು 10.1 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ.
0009 ಸಂಖ್ಯೆಯನ್ನು ಇದೇ ಸೆಪ್ಟೆಂಬರ್ 11ರಂದು ನಡೆದ ಹರಾಜಿನಲ್ಲಿ ಈ ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ಇದೇ ವೇಳೆ, 0003 ಮತ್ತು 0007 ಸಂಖ್ಯೆಗಳನ್ನು 3.1 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿದೆ. ಇದೇ ಸೀರೀಸ್‌ನ ನೋಂದಣಿ ಸಂಖ್ಯೆಯೊಂದು ಜುಲೈನಲ್ಲಿ 7.1 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿತ್ತು.
ಇದೇ ರೀತಿ ಫ್ಯಾನ್ಸಿ ಸಂಖ್ಯೆಗಳನ್ನು ಹರಾಜಿಗೆ ಇಡುವ ಮೂಲಕ ದೆಹಲಿಯ ಆರ್‌ಟಿಓ ಇಲಾಖೆಯು ಏಪ್ರಿಲ್-ಆಗಸ್ಟ್ ಅವಧಿಯಲ್ಲಿ 99.9 ಲಕ್ಷ ರೂ.ಗಳ ಆದಾಯ ಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 4.6 ಕೋಟಿ ರೂ.ಗಳು ಇಲಾಖೆಯ ಬೊಕ್ಕಸಕ್ಕೆ ಸೇರಿತ್ತು.