
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜಾರಿಯಾಗಿ 5 ವರ್ಷಗಳಾಗಿದ್ದು, 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿದೆ.
ಗುರಿ ತಲುಪುವ ನಿಟ್ಟಿನಲ್ಲಿ 4 ಆಯಾಮಗಳ ರಣ ನೀತಿಯನ್ನು ರೂಪಿಸಲಾಗಿದೆ.
ಇನ್ಪುಟ್ ವೆಚ್ಚ ಕಡಿತಗೊಳಿಸುವುದು
ಉತ್ಪನ್ನಗಳಿಗೆ ನ್ಯಾಯಯುತ ಮೌಲ್ಯವನ್ನು ನಿಗದಿಪಡಿಸುವುದು
ಸುಗ್ಗಿ ಅಥವಾ ಕಟಾವಿನ ಬಳಿಕ ನಷ್ಟವನ್ನು ಕಡಿಮೆ ಮಾಡುವುದನ್ನು ಖಚಿತಪಡಿಸುವುದು
ಆದಾಯ ವೃದ್ಧಿಸಲು ವಿಭಿನ್ನ ಯೋಜನೆ ರೂಪಿಸುವುದು
ಬೀಜದಿಂದ ಮಾರುಕಟ್ಟೆಯ ವರೆಗೆ ರೈತರಿಗೆ ಪ್ರತಿ ಹಂತದಲ್ಲಿ ಸಹಾಯ ಮಾಡುವುದು ಯೋಜನೆಯ ಉದ್ದೇಶವಾಗಿದೆ ಎಂದು ಹೇಳಲಾಗಿದೆ.
ಯೋಜನೆಗೆ 5 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಫಸಲ್ ಭೀಮಾ ಯೋಜನೆ ಕೋಟ್ಯಂತರ ರೈತರಿಗೆ ಪ್ರಯೋಜನ ನೀಡಿದೆ. ಕಷ್ಟಪಟ್ಟು ದುಡಿಯುವ ರೈತರನ್ನು ಪ್ರಾಕೃತಿಕ ವಿಕೋಪ, ಬದಲಾವಣೆಗಳಿಂದ ರಕ್ಷಿಸುವ ಮಹತ್ವದ ಯೋಜನೆ ಇದಾಗಿದ್ದು ರೈತರಿಗೆ ಲಾಭದಾಯಕವಾಗಿದೆ. ಎಲ್ಲಾ ಫಲಾನುಭವಿಗಳಿಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.