ಬೆಂಗಳೂರು: ಕೊರೋನಾ ಸಂಕಷ್ಟದ ನಡುವೆಯೂ ಸಹಕಾರ ಇಲಾಖೆಯಿಂದ 19,17,334 ರೈತರಿಗೆ 12,420.10 ಕೋಟಿ ರೂಪಾಯಿ ಸಾಲ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
2019 – 20 ನೇ ಸಾಲಿನಲ್ಲಿ 13,500 ಕೋಟಿ ರೂಪಾಯಿ ಸಾಲ ವಿತರಿಸಲಾಗಿತ್ತು. 2020 -21 ನೇ ಸಾಲಿನಲ್ಲಿ ಸಹಕಾರ ಇಲಾಖೆ ಮೂಲಕ ಕಳೆದ ಬಾರಿಗಿಂತ ಹೆಚ್ಚು ಸಲ ನೀಡಲಾಗ್ತಿದೆ ಎಂದು ಹೇಳಿದ್ದಾರೆ.
ಈ ವರ್ಷ 24.40 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ. ಸುಮಾರು 4.5 ಲಕ್ಷ ರೈತರಿಗೆ ಶೀಘ್ರವೇ ಸಾಲ ವಿತರಿಸಲಾಗುವುದು. ರೈತರಿಗೆ ತೊಂದರೆ ನೀಡದಂತೆ ಬ್ಯಾಂಕುಗಳಿಗೆ, ಸಹಕಾರ ಸಂಘಗಳಿಗೆ ಸೂಚನೆ ನೀಡಲಾಗಿದ್ದು, ರೈತರಿಗೆ ಸಾಲ ವಿತರಣೆಯಲ್ಲಿ ಲೋಪವಾಗವಾಗಬಾರದೆಂದು ತಿಳಿಸಿದ್ದು, ಉಳಿದ ರೈತರಿಗೂ ಸಾಲ ನೀಡಲಾಗುವುದು ಎಂದು ಹೇಳಿದ್ದಾರೆ.