ಪೋಷಕಾಂಶಗಳ ಆಗರವಾಗಿರುವ ಸಿರಿಧಾನ್ಯಗಳನ್ನು ಬೆಳೆಯಲು ರೈತ ಸಿರಿ ಯೋಜನೆಗೆ ಒತ್ತು ನೀಡಲಾಗಿದ್ದು, ಇದಕ್ಕಾಗಿ 10,000 ರೂ. ರೈತ ಸಿರಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದನ್ನು ಕಡಿತಗೊಳಿಸಿ 6000 ರೂ.ಗೆ ಇಳಿಕೆ ಮಾಡಲಾಗಿದೆ.
ಸಿರಿಧಾನ್ಯಗಳು ಆರೋಗ್ಯ ವರ್ಧಕ, ಪೋಷಕಾಂಶಗಳ ಅಗಲವಾಗಿದ್ದು, ವಿಶ್ವಸಂಸ್ಥೆ ಪ್ರಸಕ್ತ ವರ್ಷವನ್ನು ಸಿರಿಧಾನ್ಯ ವರ್ಷ ಎಂದು ಘೋಷಣೆ ಮಾಡಿದೆ. ರಾಗಿ, ನವಣೆ, ಹಾರಕ, ಬರಗ ಮೊದಲಾದ ಸಿರಿಧಾನ್ಯ ಬೆಳೆಯುವ ಪ್ರದೇಶಗಳ ವಿಸ್ತರಣೆ, ಉತ್ಪಾದನೆ ಹೆಚ್ಚಳಕ್ಕೆ ರೈತರಿಗೆ ಪ್ರೋತ್ಸಾಹ ನೀಡುವುದು ಯೋಜನೆಯ ಉದ್ದೇಶವಾಗಿದೆ. ಇದಕ್ಕಾಗಿ ರೈತ ಸಿರಿ ಯೋಜನೆ ಆರಂಭಿಸಿ ಸಿರಿಧಾನ್ಯ ಜಾಗೃತಿ, ಮಾರುಕಟ್ಟೆ ಸಂಪರ್ಕ ಹೆಚ್ಚಳ ಮೊದಲಾದ ಕಾರ್ಯಕ್ರಮ ಕೈಗೊಳ್ಳಲಾಗಿದೆ.
ಆದರೆ, ಸರ್ಕಾರ ಪ್ರೋತ್ಸಾಹ ಧನ ಕಡಿತಗೊಳಿಸಿದೆ. ಪ್ರತಿ ಹೆಕ್ಟೇರ್ ಗೆ 10,000 ಪ್ರೋತ್ಸಾಹ ಧನ ನೀಡುತ್ತಿದ್ದು, ಅದನ್ನು 2022 -23 ನೇ ಸಾಲಿನಿಂದ 6000 ರೂ.ಗೆ ಕಡಿತಗೊಳಿಸಲಾಗಿದೆ ಎಂದು ಹೇಳಲಾಗಿದೆ.