ನವದೆಹಲಿ: ಅನಿರೀಕ್ಷಿತ ಘಟನೆಗಳಿಂದಾಗಿ ಆದ ಬೆಳೆಹಾನಿ, ಬೆಳೆ ನಷ್ಟಕ್ಕೊಳಗಾದ ರೈತರಿಗೆ ನೆರವು ನೀಡಲಾಗುವುದು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಆರ್ಥಿಕ ಸಹಾಯ ಒದಗಿಸಲಾಗುವುದು
ಬಿತ್ತನೆ, ನಾಟಿ ಸಂದರ್ಭದಲ್ಲಿ ತಡೆ, ಕೊಯ್ಲಿನ ನಂತರದ ನಷ್ಟ, ಮಳೆ, ಪ್ರವಾಹ ಹಾನಿ ಮೊದಲಾದ ಕಾರಣದಿಂದ ಬೆಳೆ ನಷ್ಟವಾದ ರೈತರಿಗೆ ಆರ್ಥಿಕ ನೆರವು ನೀಡಲಾಗುವುದು. ರೈತರು ಹೆಚ್ಚಿನ ಮಾಹಿತಿ, ಯೋಜನೆಯ ಪ್ರಯೋಜನ ಪಡೆಯಲು ಸಮೀಪದ ಸಾಮಾನ್ಯ ಸೇವಾ ಕೇಂದ್ರ, ಬ್ಯಾಂಕ್, ವಿಮೆ ಏಜೆಂಟರನ್ನು ಸಂಪರ್ಕಿಸುವುದು. ಕಿಸಾನ್ ಕಾಲ್ ಸೆಂಟರ್ 1800 180 1551 ಕರೆ ಮಾಡಬಹುದಾಗಿದೆ ಎಂದು ಹೇಳಲಾಗಿದೆ.